ಕುಂಬರ್ಚೋಡು ಮಸೀದಿಯಲ್ಲಿ 78ನೇ ಸ್ವಾತಂತ್ರೋತ್ಸವ ಆಚರಣೆ

0

ಕುಂಬರ್ಚೋಡು ಮುಹಿಯ್ಯುದ್ದಿನ್ ಜುಮಾ ಮಸೀದಿಯಲ್ಲಿ 78ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು.

ಧ್ವಜಾರೋಹಣವನ್ನು ಮಸೀದಿ ಸಮಿತಿ ಅಧ್ಯಕ್ಷ ಹನೀಫ್ ಹಾಜಿ ಕೆ ಎಂ ನೆರೆವೇರಿಸಿ ಮಾತನಾಡಿ ರಾಷ್ಟ್ರ ಧ್ವಜ ಸಾರ್ವಭೌಮದ ಸಂಕೇತವಾಗಿದೆ ಜನರಲ್ಲಿ ರಾಷ್ಟ್ರ ದ್ವಜದ ಬಗ್ಗೆ ಅಭಿಮಾನ,ಗೌರವ ಅಗತ್ಯ ಎಂದು ನುಡಿದರು. ಈ ಸಂದರ್ಭದಲ್ಲಿ ಮಸೀದಿ ಸಮಿತಿಯ ಪದಾಧಿಕಾರಿಗಳು ಹಾಗು ಜಮಾಅತ್ ಸದಸ್ಯರುಗಳು ಮದರಸ ವಿದ್ಯಾರ್ಥಿಗಳು ಉಪಸ್ಥಿರಿದ್ದರು.
ಕೊನೆಯಲ್ಲಿ ಸಿಹಿ ತಿಂಡಿ ವಿತರಣೆ ನಡೆಯಿತು.