ಬಾಳುಗೋಡು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ನಿ. ಬಾಳುಗೋಡು ಇದರ ವಾರ್ಷಿಕ ಮಹಾಸಭೆಯು ಸೆ.20 ರಂದು ಸಂಘದ ವಠಾರದಲ್ಲಿ ನಡೆಯಿತು.
ಬಾಳುಗೋಡು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅದ್ಯಕ್ಷೆ ಶರ್ಮಿಲಾ ಕಟ್ಟೆಮನೆ ಅಧ್ಯಕ್ಷತೆ ವಹಿಸಿದ್ದರು.
ಸಂಘದ ಕಾರ್ಯದರ್ಶಿ ವಾಣಿಶ್ರೀ ಸಭೆಗೆ ವಾರ್ಷಿಕ ವರದಿ ವಾಚಿಸಿದರು.
ಪ್ರಸ್ತುತ ಸಾಲಿನಲ್ಲಿ ಸಂಘವು68ಲಕ್ಷದ21 ಸಾವಿರ ವ್ಯವಹಾರ ಹೊಂದಿದ್ದು 37000 ಲಾಭಂಶ ಹೊಂದಿರುತ್ತದೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ದ.ಕ ಹಾಲು ಒಕ್ಕೂಟ ಮಂಗಳೂರು ಸುಳ್ಯ ತಾಲೂಕು ವಿಸ್ತರಣಾದಿಕಾರಿ ಹರೀಶ್ ಕುಮಾರ್ ಮಾತನಾಡಿ ಸಂಘವು ಅಭಿವೃದ್ಧಿ ಹೊಂದಿ ಮಾದರಿ ಸಂಘವಾಗಿ ಮೂಡಿಬರಲಿ ಅಂತ ಹಾರೈಸಿದರು.
ಸಂಘದ ಉಪಾಧ್ಯಕ್ಷ ರಾದ ಉಷಾ ಪ್ರಭಾಕರ ಕಿರಿಭಾಗ,ನಿರ್ದೇಶಕರುಗಳಾದ ವನಿತ ಕೆ, ಬಾರತಿ ಕೆ,ಪುಷ್ಪಲತಾ ಯಂ, ಕಾವ್ಯ ಶಿವಾಲ,ಚಿತ್ರ ಕೆ, ಕವಿತ ಕೆ.ವಿ,ಪುಷ್ಪವೇಣಿ,ಪುಷ್ಪಾವತಿ ಬಿ,ಲಲಿತ ಬಿ,ಭುವನೇಶ್ವರಿ, ಕಾರ್ಯದರ್ಶಿ ವಾಣಿಶ್ರೀ ವೇದಿಕೆಯಲ್ಲಿದ್ದರು.
ಈ ಸಂದರ್ಭದಲ್ಲಿ ದ.ಕ ಹಾಲು ಒಕ್ಕೂಟದಿಂದ ಕೊಡಲ್ಪಟ್ಟ ಹಸಿರು ಮೇವು ಅಭಿವೃದ್ಧಿ ಪಡಿಸಿದ ಉತ್ತಮ ಹೈನುಗಾರ ಸ್ಥಾನವನ್ನು ಪಡೆದ ದೀಕ್ಷಾ ಕೊತ್ನಡ್ಕರವರ ಪರವಾಗಿ ಮನೆಯವರನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಸದಸ್ಯರುಗಳು ಫಲಾನುಭವಿಗಳು ಹಾಜರಿದ್ದರು
ಪುಷ್ಪವೇಣಿ ಪ್ರಾರ್ಥಿಸಿ ಉಷಾ ಪ್ರಭಾಕರ್ ಸ್ವಾಗತಿಸಿ ವನಿತರವರು ಧನ್ಯವಾದಗೈದರು