ಕಲ್ಚರ್ಪೆಗೆ ಕಸದ ವಾಹನ ಬರದಂತೆ ತಡೆಯಲು ಬೃಹತ್ ಬಂಡೆ ಕಲ್ಲನ್ನು ರಸ್ತೆಗೆ ಅಡ್ಡಲಾಗಿ ಇಟ್ಟ ಸ್ಥಳೀಯ ಹೋರಾಟ ಸಮಿತಿ

0

ವಿವರ ಕೇಳಿ ಠಾಣೆಗೆ ಬರುವಂತೆ ಸುಳ್ಯ ಪೊಲೀಸ್ ಠಾಣೆಯಿಂದ ಸೂಚನೆ

ಕಲ್ಚೆರ್ಪೆ ಕಸದ ಬಗ್ಗೆ ಸ್ಥಳೀಯ ಹೋರಾಟ ಸಮಿತಿಯವರು ನಡೆಸುತ್ತಿರುವ ಹೋರಾಟ ಇದೀಗ ಹೊಸ ರೂಪ ಪಡೆದುಕೊಳ್ಳುತ್ತಿದೆ.

ಮೊನ್ನೆ ಮೊನ್ನೆ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಕಪ್ಪು ಪಟ್ಟಿ ಧರಿಸಿ ಪಾಲ್ಗೊಂಡು ಅಧಿಕಾರಿ ವರ್ಗದವರನ್ನು ಸ್ಥಳಕ್ಕೆ ಬರುವಂತೆ ಮಾಡಿದ ಹೋರಾಟ ಗಾರರು ಇದೀಗ ಸುಳ್ಯ ನಗರದಿಂದ ಕಲ್ಷೆರ್ಪೆಗೆ ಕಸ ತರುವ ಯಾವುದೇ ವಾಹನ ಬರದಂತೆ ರಸ್ತೆಯಲ್ಲಿ ಬೃಹತ್ ಬಂಡೆ ಕಲ್ಲು ಇಟ್ಟು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಲ್ಲು ಇಟ್ಟಿರುವ ಬಗ್ಗೆ ಮಾಹಿತಿ ತಿಳಿದ ಸುಳ್ಯ ಪೊಲೀಸರು ಹೋರಾಟ ಸಮಿತಿಯವರನ್ನು ಠಾಣೆಗೆ ಬರುವಂತೆ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಒಟ್ಟಿನಲ್ಲಿ ಕಲ್ಚೆರ್ಪೆ ತ್ಯಾಜ್ಯ ಘಟಕದ ಬಗ್ಗೆ ನಗರ ಪಂಚಾಯತ್ ಮತ್ತು ಸ್ಥಳೀಯರ ನಡುವೆ ನಡೆಯುತ್ತಿರುವ ಈ ಸಮರ ಮುಂದೆ ಯಾವ ದಿಕ್ಕಿಗೆ ತಿರುಗಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.