ಪಂಜ: ಬಿ.ಎಂ.ಎಸ್ ಸಂಪ್ರೀತಿ ಆಟೋ ನಿಲ್ದಾಣದಲ್ಲಿ ಸ್ವಾತಂತ್ರೋತ್ಸವ

0

78ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಬಿ.ಎಂ.ಎಸ್ ಸಂಪ್ರೀತಿ ಆಟೋ ನಿಲ್ದಾಣ ಪಂಜ ಇಲ್ಲಿ ಆಚರಿಸಲಾಯಿತು . ಆಟೋ ಚಾಲಕರ ಸಂಘದ ಅಧ್ಯಕ್ಷ ಬಾಲಕೃಷ್ಣ ಸಂಪ್ಯಾಡಿ ಸಭಾಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ನಿವೃತ್ತ ಸೈನಿಕ ದಾಮೋದರ ಪಲ್ಲೋಡಿ , ಪಂಚಶ್ರೀ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷ ಪವನ್ ಪಲ್ಲತಡ್ಕ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು .
ನಿವೃತ್ತ ಸೈನಿಕ ದಾಮೋದರ ಪಲ್ಲೋಡಿ ಧ್ವಜಾರೋಹಣ ನೆರವೇರಿಸಿ ಹಿತವಚನ ನುಡಿದರು ಮತ್ತು ಈ ಕಾರ್ಯಕ್ರಮದಲ್ಲಿ ಅಂಗಡಿ ಮಾಲಕರು ಮತ್ತು ಪಂಚಶ್ರೀ ಸ್ಪೋರ್ಟ್ಸ್ ಕ್ಲಬ್ ಸದಸ್ಯರು ಭಾಗಿಯಾಗಿದ್ದರು . ಕಾಮಧೇನು ಕೋಲ್ಡ್ ಹೌಸ್ ಮಾಲಕ ನಾಗೇಶ್ ನಾವೂರು ರವರು ಸಿಹಿ ತಿಂಡಿ ವಿತರಿಸಿದರು.ದಾಮೋದರ ನೇರಳ ಈ ಕಾರ್ಯಕ್ರಮವನ್ನು ನಿರೂಪಿಸಿದರು ಬಿ.ಎಂ.ಎಸ್ ಘಟಕದ ಗೌರವಾಧ್ಯಕ್ಷ ದೇವಪ್ಪ ಹೆಚ್ ಮತ್ತು ಎಲ್ಲಾ ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗಿಯಾದರು ಹಿರಿಯ ಪ್ರಾಥಮಿಕ ಶಾಲೆ ಪಂಜದ ಮಕ್ಕಳಿಗೆ ಬಿ .ಎಂ .ಎಸ್ ವತಿಯಿಂದ ಸಿಹಿ ಹಂಚಲಾಯಿತು ಈ ಕಾರ್ಯಕ್ರಮವನ್ನು ಬಾಲಕೃಷ್ಣ ಸಂಪ್ಯಾಡಿ ವಂದಿಸಿದರು.