ಸುಣ್ಣಮೂಲೆ: ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಸ್ವಾತಂತ್ರ್ಯೋತ್ಸವ

0

ಕನಕಮಜಲು ಗ್ರಾಮದ ಸುಣ್ಣಮೂಲೆ ಬದ್ರಿಯಾ ಜುಮಾ ಮಸೀದಿಯಲ್ಲಿ ಎಸ್.ಕೆ.ಎಸ್.ಎಸ್.ಎಫ್. ಸುಣ್ಣಮೂಲೆ ಶಾಖಾ ವತಿಯಿಂದ 78ನೇ ಸ್ವಾತಂತ್ರ್ಯೋತ್ಸವವನ್ನು ಆ.15ರಂದು ಮಸೀದಿಯ ವಠಾರದಲ್ಲಿ ಆಚರಿಸಲಾಯಿತು. ಸ್ಥಳೀಯ ಖತೀಬರಾದ ಉಸ್ತಾದ್ ಸಿರಾಜುದ್ದೀನ್ ಫಾಲಿಲ್ ಅಲ್-ಇರ್ಫಾನಿ ಅಲ್-ಮಖ್ದೂಮಿ ಸಂದೇಶ ಭಾಷಣ ಮಾಡಿದರು.

ಮುಹಝ್ಝಿನ್:- ಸಲ್ಮಾನುಲ್ ಫಾರಿಸ್ ಇರ್ಫಾನಿ ಉಸ್ತಾದರು ದುಆಃ ನೆರವೇರಿಸಿದರು. ಮಸೀದಿಯ ಶಾಖಾ ಅಧ್ಯಕ್ಷ ಹಸೈನಾರ್ ಕೆ.ಸಿ. ರಫೀಕ್ .ಪಿ ರವರು ಧ್ವಜಾರೋಹಣ ನೆರವೇರಿಸಿದರು.

ಈ ಸಂದರ್ಭದಲ್ಲಿ ಶಾಖಾ ಪ್ರಧಾನ ಕಾರ್ಯದರ್ಶಿ ಅಬೂ ಸ್ವಾಲಿಹ್ ಎಸ್.ಎ. ಮಾತನಾಡಿದರು ಖಜಾಂಜಿ ಹಕೀಮ್ ಬಿ.ಕೆ. ಸ್ವಾಗತಿಸಿ, ಕಾರ್ಯನಿರತ ಕಾರ್ಯದರ್ಶಿ ರಂಷಾದ್ ಎಸ್. ಎಂ ವಂದಿಸಿದರು.
ಗೌರವ ಉಪಸ್ಥಿತರಾಗಿ ಹಿರಿಯರಾದ ಪಿ.ಎ. ಅಬ್ದುಲ ತೋಟಂಗರೆ ಭಾಗವಹಿಸಿದ್ದರು. ಈ ಸಂದರ್ಭ ಮದ್ರಸ ವಿದ್ಯಾರ್ಥಿಗಳು, ಜಮಾಅತರು, ಎಸ್.ಕೆ.ಎಸ್.ಎಸ್.ಎಫ್. ಸದಸ್ಯರು ಸೇರಿದಂತೆ ಹಲವರು ಭಾಗಿಯಾದರು, ಕೊನೆಯಲ್ಲಿ ಸಿಹಿತಿಂಡಿ ವಿತರಣೆ ನಡೆಯಿತು‌.