ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಲಾಡಿನ ಕೊರತೆ ಕಂಡು ಬಂದಿದೆ.
ಕಾರ್ಯಕ್ರಮದಲ್ಲಿ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು, ಅಧಿಕಾರಿಗಳು, ಜನಪ್ರತಿನಿಧಿಗಳು, ಸಾರ್ವಜನಿಕರು ಸೇರಿ ಸುಮಾರು 1500 ಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು. ತಾಲೂಕು ಆಡಳಿತದ ವತಿಯಿಂದ ಲಾಡು ವಿತರಣೆ ನಡೆಯುತ್ತದೆ. ಆದರೆ ಈ ಬಾರಿ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಲಾಡು ಸಿಗದೆ, ಕೊರತೆ ಎದುರಾಯಿತು. ಸುಮಾರು ಐನೂರಕ್ಕೂ ಅಧಿಕ ಮಂದಿಗೆ ಲಾಡು ಸಿಗಲಿಲ್ಲವೆಂದು ತಿಳಿದುಬಂದಿದೆ.
ಈ ಕುರಿತು ಶಿಕ್ಷಕರೊಬ್ಬರು ಮಾಹಿತಿ ನೀಡಿ, “ಇಲ್ಲಿ ಪ್ರತೀ ವರ್ಷ ಒಂದೂವರೆ ಸಾವಿರಕ್ಕೂ ಅಧಿಕ ಮಂದಿ ಸೇರುತ್ತಾರೆ. ಈ ಬಾರಿಯೂ ಸೇರಿದ್ದಾರೆ. ನಮಗೆ ಸುಮಾರು 1 ಸಾವಿರದಷ್ಟು ಲಾಡು ಬಂದಿದೆ.ಅದರ ವಿತರಣೆ ಆಗಿದೆ. ಸುಬ್ರಹ್ಮಣ್ಯ ದೇವಸ್ಥಾನದಿಂದ ಲಾಡು ತರಿಸುವುದರಿಂದ ಎರಡು ಸಾವಿರ ಲಾಡು ತರಿಸಿದ್ದರೆ ಸರಿಯಾಗುತ್ತಿತ್ತು” ಎಂದು ತಿಳಿಸಿದರು.