ಇಂದಿರಾವಾಜ್ ಅಂಗನವಾಡಿಯಲ್ಲಿ 78ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ

0

ಪೆರಾಜೆ ಗ್ರಾಮದ ಇಂದಿರಾವಾಜ್ ಅಂಗನವಾಡಿ ಕೇಂದ್ರದಲ್ಲಿ 78ನೇ ವರ್ಷ ದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.

ಗ್ರಾಮ ಪಂಚಾಯತ್ ಸದಸ್ಯರಾದ ಸುರೇಶ್ ಪೇರುಮುಂಡ ಧ್ವಜಾರೋಹಣ ನೆರವೇರಿಸಿದರು. ಸ್ವಾತಂತ್ರೋತ್ಸವದ ಮಹತ್ವದ ಬಗ್ಗೆ ಮಾತನಾಡಿದರು .

ಬಳಿಕ ಅಂಗನವಾಡಿ ಪುಟಾಣಿಗಳ ಸ್ಪರ್ಧೆ ಮತ್ತು ಬಹುಮಾನ ವಿತರಣೆ ನಡೆಯಿತು. ಈ ವೇಳೆ ಪಂಚಾಯತ್ ಸದಸ್ಯರಾದ ಜಯಲಕ್ಷ್ಮಿ ಧರಣಿಧರ ಬಾಲ ವಿಕಾಸ ಸಮಿತಿಯ ಅಧ್ಯಕ್ಷರಾದ ಪ್ರೇಮಲತಾ ಬಿನು ಅಂಗನವಾಡಿ ಹಿರಿಯ ನಾಗರಿಕರಾದ ಸೀತಾರಾಮ ಕದಿಕಡ್ಕ ಮತ್ತು ಮಹಾಲಿಂಗ ಪಾಟಾಲಿ ಅಂಗನವಾಡಿ ಸಹಾಯಕಿ ಶ್ರೀಮತಿ ಗೀತಾ ಹೇಮ ಮತ್ತು ಅಂಗನವಾಡಿ ಪುಟಾಣಿಗಳು ಪೋಷಕರು, ಅಗ್ನಿ ಯುವಕ ಮಂಡಲದ ಸದಸ್ಯರು, ಆಶಾ ಕಾರ್ಯಕರ್ತೆ ಶ್ರೀಮತಿ ಜಯಂತಿ ಕೋಡಿ ಉಪಸ್ಥಿತರಿದ್ದರು . ಸೀತಾರಾಮ ಕದಿಕಡ್ಕ ಸ್ವಾಗತಿಸಿ, ಅಂಗನವಾಡಿ ಪುಟಾಣಿ ಪ್ರಾರ್ಥನೆ ಮಾಡಿದರು. ಅಂಗನವಾಡಿ ಶಿಕ್ಷಕಿ ಶ್ರೀಮತಿ ನಿರ್ಮಲ ಚಂದ್ರಶೇಖರ ವಂದನಾರ್ಪಣೆ ಗೈದರು.