ಕೆವಿಜಿ ಅಮರ ಜ್ಯೋತಿ ಪಿಯು ಕಾಲೇಜಿನಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ಸಡಗರ

ದೇಶಭಕ್ತಿ ಮೈಗುಡಿಸಿಕೊಂಡು ಉತ್ತಮ ನಾಗರಿಕರಗಬೇಕು -ಡಾ. ಉಜ್ವಲ್ ಯು ಜೆ

0

ದೇಶ ನಿರ್ಮಾಣದಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು -ಮಾದಂಡ ತಿಮ್ಮಯ್ಯ

ಇಂದಿನ ಯುವ ಜನತೆಯಲ್ಲಿ ದೇಶಾಭಿಮಾನ, ಸ್ವಾತಂತ್ರ್ಯದ ಅರ್ಥಪೂರ್ಣತೆಯನ್ನ ಮನದಟ್ಟು ಮಾಡುವ ಉದ್ದೇಶದಿಂದ ಕುರುಂಜಿ ಜಾನಕಿ ವೆಂಕಟರಮಣ ಗೌಡ ಸಭಾಭವನದಲ್ಲಿ ಸ್ವತಂತ್ರ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ವಿದ್ಯಾರ್ಥಿಗಳಲ್ಲಿ ಸ್ವತಂತ್ರ ಹಬ್ಬದ ಸಂಭ್ರಮ ಮನೆ ಮಾಡಿದ್ದು. ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಖ್ಯಾತ ಮಾಜಿ ಅಂತಾರಾಷ್ಟ್ರೀಯ ರಗ್ಬಿ ಆಟಗಾರ ಹಾಗೂ ಪ್ರಗತಿ ಸಂಸ್ಥೆಯ ಪ್ರೊಪ್ರೈಟರ್ ಆದ ಮಾದಂಡ ತಿಮ್ಮಯ್ಯ ಅವರನ್ನು ಗೌರವಪೂರ್ವಕವಾಗಿ ವೇದಿಕೆಗೆ ಬರಮಾಡಿಕೊಳ್ಳಲಾಯಿತು.

ಮುಖ್ಯ ಅತಿಥಿಗಳನ್ನು ಕೆವಿಜಿ ಅಮರಜ್ಯೋತಿಯ ಕಾರ್ಯ ನಿರ್ವಹಣಾಧಿಕಾರಿಗಳಾದ ಡಾ. ಉಜ್ವಲ್ ಯು ಜೆರವರು ಸನ್ಮಾನಿಸಿ ಗೌರವಿಸಿದರು.ಮತ್ತು ಅಮರಜ್ಯೋತಿ ಸ್ಕಾಲರ್ಷಿಪ್ ಎಕ್ಸಾಮಿನೇಷನ್ ರಿಜಿಸ್ಟ್ರೇಷನ್ ಲಿಂಕ್ಅನ್ನು ಉದ್ಘಾಟಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆವಿಜಿ ಅಮರಜ್ಯೋತಿ ಪದವಿ ಪೂರ್ವ ಕಾಲೇಜಿನ ಸಿಇಒ ಡಾ. ಉಜ್ವಲ್ ಯು ಜೆ ರವರು ವಹಿಸಿದ್ದರು. ಅವರು ಮಾತನಾಡಿ ದೇಶಭಕ್ತಿ ಮೈಗುಡಿಸಿಕೊಂಡು ಉತ್ತಮ ನಾಗರಿಕರಗಲು ಕರೆಕೊಟ್ಟರು.

ನೆರೆದಿದ್ದ ಸರ್ವರೂ, ವಿದ್ಯಾರ್ಥಿಗಳು ಗೌರವ ಮತ್ತು ದೇಶಾಭಿಮಾನದಿಂದ ಮನಸ್ವಿ ಮತ್ತು ತಂಡದವರ ರಾಷ್ಟ್ರಗೀತೆಯ ಗಾಯನದೊಟ್ಟಿಗೆ ರಾಷ್ಟ್ರಧ್ವಜ ರೋಹಣ ಕಾರ್ಯಕ್ರಮವನ್ನು ನೆರವೇರಿಸಿದರು. ಮುಖ್ಯ ಅತಿಥಿಗಳ ಪರಿಚಯವನ್ನು ವಿದ್ಯಾರ್ಥಿನಿ ಅಮೂಲ್ಯ ನೆರವೇರಿಸಿದರು. ಮುಖ್ಯ ಅತಿಥಿಗಳು ವಿದ್ಯಾರ್ಥಿಗಳಲ್ಲಿ ದೇಶಪ್ರೇಮ ಒಡಮೂಡುವಂತೆ ಪ್ರೇರೇಪಿಸಿದರು.

ಪ್ರಥಮ ಪಿಯುಸಿ ವಿದ್ಯಾರ್ಥಿನಿ ಖುಷಿ ಕಾರ್ಯಕ್ರಮಕ್ಕೆ ಸರ್ವರನ್ನು ಸ್ವಾಗತ ಕೋರಿದಳು.ಅಮರಜ್ಯೋತಿಯ ಇಂಗ್ಲಿಷ್ ಉಪನ್ಯಾಸಕಿ ಮಲ್ಲಿಕಾ ಎಂ ಎಲ್,ವಿದ್ಯಾರ್ಥಿ ಸಾನ್ವಿ ಮತ್ತು ಪ್ರತಿಜ್ಞಾ ಕಾರ್ಯಕ್ರಮವನ್ನು ನಿರೂಪಿಸಿದರೆ ,ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ತನ್ವಿ ವಂದನಾರ್ಪಣೆಯನ್ನು ಸಲ್ಲಿಸಿದರು. ದಿನದ ವಿಶೇಷತೆ,ಮಹತ್ವ ,ತ್ಯಾಗ – ಬಲಿದಾನದ ಬಗ್ಗೆ ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಜನನಿ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು. ಹಾಗೂ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಚಟುವಟಿಕೆಯಾಗಿ ಕೆವಿಜಿ ಅಮರಜ್ಯೋತಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ದೇಶ ಅಭಿಮಾನ ಗೀತೆಯ ನೃತ್ಯವನ್ನು ಮತ್ತು ಕೆವಿಜಿ ಐಪಿಎಸ್ ನ ವಿದ್ಯಾರ್ಥಿಗಳಿಂದ ರಾಷ್ಟ್ರ ಅಭಿಮಾನ ಗೀತೆಗಳು ಕಾರ್ಯಕ್ರಮವನ್ನು ಸಾದರಪಡಿಸಲಾಯಿತು.

ಕಾರ್ಯಕ್ರಮಕ್ಕೆ ಕಾಲೇಜಿನ ಮ್ಯಾನೇಜಿಂಗ್ ಟ್ರಸ್ಟಿ ಡಾ. ರೇಣುಕಾ ಪ್ರಸಾದ್ ಕೆ ವಿ, ಟ್ರಸ್ಟಿ ಜ್ಯೋತಿ ಆರ್ ಪ್ರಸಾದ್ ಹಾಗೂ ಆಡಳಿತ ಮಂಡಳಿಯವರು ಶುಭಕೋರಿದರು.ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಯಶೋದಾ ರಾಮಚಂದ್ರ, ಉಪ ಪ್ರಾಂಶುಪಾಲರಾದ ದೀಪಕ್ ವೈ ಆರ್ , ಕೆವಿಜಿ ಐಪಿಎಸ್ ನ ಪ್ರಾಂಶುಪಾಲರಾದ ಅರುಣ್ ಕುಮಾರ್ ಉಪಪ್ರಾಂಶುಪಾಲರಾದ ಶಿಲ್ಪಾ ಬಿದ್ದಪ್ಪ,ಕೆವಿಜಿ ಐಟಿಐ ನ ಪ್ರಾಂಶುಪಾಲರಾದ ಚಿದಾನಂದ ಬಾಳಿಲ, ಕೆವಿಜಿ ಪಾಲಿಟೆಕ್ನಿಕ್ ಪ್ರಾಂಶುಪಾಲರಾದ ಶ್ರೀಧರ್,ಹಾಗೂ ಆಡಳಿತ ಮಂಡಳಿಯವರು ಉಪಸ್ಥಿತರಿದ್ದರು.