ಚಿದ್ಗಲ್ ನಲ್ಲಿ ಆಟಿ ಆಚರಣೆ, ಸನ್ಮಾನ ಕಾರ್ಯಕ್ರಮ

0

ಶ್ರೀ ದುರ್ಗಾ ಮಹಿಳಾ ಮಂಡಲ ( ರಿ) ಕೂತ್ಕುಂಜ , ಶ್ರೀದೇವಿ ಸಂಜೀವಿನಿ ಸಂಘ ಚಿದ್ಗಲ್, ಧರ್ಮಶ್ರೀ ಮಹಿಳಾ ನವೋದಯ ಸಂಘ ಚಿದ್ಗಲ್, ಧನುಶ್ರೀ ಮಹಿಳಾ ನವೋದಯ ಸಂಘ ಚಿದ್ಗಲ್, ದುರ್ಗಾಶ್ರೀ ಆತ್ಮ ರೈತ ಸಂಘ ಚಿದ್ಗಲ್ ಇವುಗಳ ಜಂಟಿ ಆಶ್ರಯದಲ್ಲಿ ಆಟಿ ಆಚರಣೆ ಹಾಗೂ ಸನ್ಮಾನ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

ಕಾರ್ಯಕ್ರಮವನ್ನು ಪಂಜ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ವಿಜಯಲಕ್ಷ್ಮಿ ಜಳಕದ ಹೊಳೆ ಉದ್ಘಾಟಿಸಿದರು . ಶ್ರೀದುರ್ಗಾ ಮಹಿಳಾ ಮಂಡಲದ ಅಧ್ಯಕ್ಷೆ ದೇವಕಿ ಧರ್ಮಪಾಲ ಅಧ್ಯಕ್ಷತೆ ವಹಿಸಿದ್ದರು . ಅತಿಥಿಗಳಾಗಿ ನಿವೃತ್ತ ಶಾರೀರಿಕ ಶಿಕ್ಷಕ ಶಿವರಾಮ ಏನೆಕಲ್ ಉಪಸ್ಥಿತರಿದ್ದರು.

w

ಚಂದ್ರಾವತಿ ಹೊನ್ನಪ್ಪ ಚಿದ್ಗಲ್ ( ಅಧ್ಯಕ್ಷರು , ಧರ್ಮಶ್ರೀ ನವೋದಯ ಚಿದ್ಗಲ್, ಸಂಜೀವಿನಿ ಸಂಘ ಚಿದ್ಗಲ್, ಮಹಿಳಾ ಮಂಡಲದ ಸಂಘಟನೆ ಚಿದ್ಗಲ್ ) , ಹೇಮಾ ವಸಂತ್ ಚಿದ್ಗಲ್ ( ಅಧ್ಯಕ್ಷರು, ನವೋದಯ ಸಂಘ ಚಿದ್ಗಲ್ ) ವೇದಿಕೆಯಲ್ಲಿ ಉಪಸ್ಥಿತ ರಿದ್ದರು.

ಕಾರ್ಯಕ್ರಮದಲ್ಲಿ ನಿವೃತ್ತ ದೈಹಿಕ ಶಿಕ್ಷಕ ಯೋಗೀಶ್ ಚಿದ್ಗಲ್ ರವರನ್ನು ಸನ್ಮಾನಿಸಲಾಯಿತು. ಶಿವರಾಮ್ ಏನೆಕಲ್ ರವರು ಸನ್ಮಾನ ನೆರವೇರಿಸಿದರು.

ಆಟಿ ತಿಂಗಳಲ್ಲಿ ಮಾಡುವ ಖಾದ್ಯ ಗಳ ಸ್ಪರ್ಧೆ, ಚೆನ್ನೆಮಣೆ , ಎಕ್ಕಟಿ ಆಟಗಳ ಸ್ಪರ್ಧೆಗಳು ನಡೆದವು.

ಪದ್ಮಾವತಿ ಚಿನ್ನಪ್ಪ ಚಿದ್ಗಲ್ ಪ್ರಾರ್ಥಿಸಿದರು.‌ ಚಂದ್ರಾವತಿ ಹೊನ್ನಪ್ಪ ಚಿದ್ಗಲ್ ರವರು ಸ್ವಾಗತಿಸಿ ಪ್ರಸ್ತಾವನೆಗೈದರು. ಹೇಮಾ ವಸಂತ್ ಚಿದ್ಗಲ್ ಕಾರ್ಯಕ್ರಮ ನಿರೂಪಿಸಿದರು.


ಭಾಸ್ಕರ ಚಿದ್ಗಲ್ , ಹೊನ್ನಪ್ಪ ಚಿದ್ಗಲ್, ಕಾರ್ಯಪ್ಪ ಚಿದ್ಗಲ್ , ಬಾಲಕೃಷ್ಣ ಬಿಳಿಮಲೆ ಹಾಗೂ ಸಂಘಟನೆಗಳ ಪದಾಧಿಕಾರಿಗಳು , ಬಂಧುಗಳು ಸಹಕರಿಸಿದರು. ಚಂದ್ರಾವತಿ ಭಾಸ್ಕರ ಧನ್ಯವಾದ ನೀಡಿದರು.