ಮಾಸ್ಟರ್ ಕ್ರಿಯೇಶನ್ಸ್ ವತಿಯಿಂದ ಸ್ವಾತಂತ್ರೋತ್ಸವದ ಅಂಗವಾಗಿ ನಡೆದ ಸಂಗೀತ ಕಲರವ ಕಾರ್ಯಕ್ರಮ

0

ವಿವಿಧ ಜಿಲ್ಲೆಗಳ 40 ಕ್ಕೂ ಹೆಚ್ಚು ಗಾಯಕರು ಭಾಗಿ

ಮಾಸ್ಟರ್ ಕ್ರಿಯೇಶನ್ಸ್ ಸುಳ್ಯ ಇದರ ವತಿಯಿಂದ 78ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಸಂಗೀತ ಕಲರವ ಕಾರ್ಯಕ್ರಮ ನಡೆಯಿತು.

ಈ ಕಾರ್ಯಕ್ರಮದಲ್ಲಿ ಮಂಗಳೂರು,ಪುತ್ತೂರು, ಹಾಸನ, ಕೊಡಗು,ಮೈಸೂರು ಕಾಸರಗೋಡು ಮುಂತಾದ ಕಡೆಗಳಿಂದ ಸುಮಾರು 40ಕ್ಕೂ ಹೆಚ್ಚು ಗಾಯಕರು ಕಾಯಕ್ರಮದಲ್ಲಿ ಭಾಗವಹಿಸಿದ್ದರು.

ವೆಂಕಟರಮಣ ಸೊಸೈಟಿ ಸಭಾ ಭವನದಲ್ಲಿ ನಡೆದ ಕಾರ್ಯಕ್ರಮದ ಉದ್ಘಾಟನೆಯನ್ನು ಕಲಾ ಪೋಷಕಿ ಪ್ರಮೀಳಾ ಶೆಟ್ಟಿ ಸುಳ್ಯ ನೆರವೇರಿಸಿದರು.

ವೇದಿಕೆಯಲ್ಲಿ ಹನುಮಂತ ಕೆಎಸ್ಆರ್ಟಿಸಿ,ರಾಜೇ ಶಾಮ್, ಸಿ ಕೆ ಮಾಸ್ಟರ್ ಸುಳ್ಯ,ಶ್ರೇಯಾ ಎಂ ಜಿ, ಶಿವಾನಂದ ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಆಯೋಜಕ ಮಾಸ್ಟರ್ ಸ್ಟುಡಿಯೋ ಮಾಲಕ ಚನ್ನಕೇಶವರವರು ಸ್ವಾಗತಿಸಿ,ನಿರೂಪಿಸಿ, ವಂದಿಸಿದರು.