ತೊಡಿಕಾನ : ಅಕ್ರಮ ದನ ಸಾಗಾಟ

0

ಸ್ಥಳೀಯರಿಂದ ತಡೆ, ಪೊಲೀಸ್ ವಶ

ತೊಡಿಕಾನ ಸಮೀಪ ಅಶೋಕ್ ಲೈಲೇಂಡ್ ಗೂಡ್ಸ್ ಟೆಂಪೋ ವಾಹನದಲ್ಲಿ ಅಕ್ರಮ ದನಸಾಗಾಟ ಆಗುತ್ತಿರುವ ಬಗ್ಗೆ ಸ್ಥಳೀಯರು ತಡೆದು ಪೊಲೀಸರಿಗೆ ಒಪ್ಪಿಸಿದ ಘಟನೆ ಇಂದು ಸಂಜೆ 7 ಗಂಟೆಗೆ ನಡೆದಿದೆ.

ವಾಹನದಲ್ಲಿ ಒಂದು ಹಸು ಮತ್ತು ಒಂದು ದನ ಇದ್ದು ಪಿರಿಯಾಪಟ್ಟಣ ಕಡೆಗೆ ಕೊಂಡೆಯ್ಯುತ್ತಿದ್ದರು ಇಂದು ತಿಳಿದು ಬಂದಿದೆ.

ಸುಳ್ಯ ಪೊಲೀಸರು ದನಸಾಗಾಟ ಮಾಡುತ್ತಿದ್ದವರನ್ನು ಮತ್ತು ವಾಹನವನ್ನು ಠಾಣೆಗೆ ತಂದು ವಿಚಾರಣೆ ನಡೆಸುತ್ತಿದ್ದಾರೆ.