ಸುಬ್ರಹ್ಮಣ್ಯ :ಮಹಿಳಾ ಸಂಘಟನೆಯವರಿಂದ ಆಟಿ ಸಂಪ್ರದಾಯದ ಆಚರಣೆ

0

ಶ್ರೀ ವಾಣಿ ವನಿತಾ ಸಮಾಜ ಸುಬ್ರಹ್ಮಣ್ಯ,
ಅಂಬಿಕಾ  ಶ್ರೀ ಶಕ್ತಿ ಗೊಂಚಲು ಸಮಿತಿ ಸುಬ್ರಹ್ಮಣ್ಯ,
ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ, ಅಂಗನವಾಡಿ ಕೇಂದ್ರ  ಇವರ ಜಂಟಿ ಆಶ್ರಯದಲ್ಲಿ ಆ.15 ರಂದು ಆಟಿ ತಿಂಗೊಳುಡು ಒಂಜಿ ದಿನ  ಕಾರ್ಯಕ್ರಮ ಸುಬ್ರಹ್ಮಣ್ಯ ಅಂಗನವಾಡಿ ಕೇಂದ್ರದಲ್ಲಿ ನಡೆಯಿತು.

ಎಸ್. ಎಸ್. ಪಿ. ಯು ಕಾಲೇಜಿನ ಉಪನ್ಯಾಸರಾದ   ರತ್ನಾಕರ ಸುಬ್ರಹ್ಮಣ್ಯ ಚೆನ್ನೆ ಮಣೆ ಆಡುವ ಮೂಲಕ ಕಾರ್ಯಕ್ರಮ ಕ್ಕೆ ಚಾಲನೆ ನೀಡಿದರು.
ಸಮುದಾಯ ಆರೋಗ್ಯ ಅಧಿಕಾರಿ ಶ್ರೀಮತಿ ಜ್ಯೋತಿ ಎಂ ಜೆ  ಆಟಿ ಯಲ್ಲಿ ಮಾಡುವಂತಹ ಅಡುಗೆಯ ಮಹತ್ವವನ್ನು, ಮಾಹಿತಿ ನೀಡಿದರು. ಶ್ರೀ ವಾಣಿ ವನಿತಾ ಸಮಾಜದ  ಅಧ್ಯಕ್ಷರಾದ ಪುಷ್ಪ ಕೆ.ಎಸ್, ಅಂಬಿಕಾ  ಶ್ರೀ ಶಕ್ತಿ ಗೊಂಚಲು  ಸಮಿತಿಯ ಅಧ್ಯಕ್ಷರಾದ ಜಯಂತಿ ಭಟ್, ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಅಧ್ಯ್ಷಕ್ಷರಾದ ಶೋಬಾ ನಲ್ಲ್ಲೂರಾಯ, ಅಂಗನವಾಡಿ ಕೇಂದ್ರದ ಶಿಕ್ಷಕಿ ಯಾದ  ವಿಶಾಲಾಕ್ಷಿ  ಮತ್ತು ವಾಣಿ ವನಿತಾ ಸಮಾಜದ ಕಾರ್ಯದರ್ಶಿಯಾದ ಸುಜಾತಾ ಗಣೆಶ್ ವೇದಿಕೆಯಲ್ಲಿ ಉಪಸ್ಥಿರಿದ್ದರು. ವಾಣಿ
ಸಮಾಜದ ಅಧ್ಯಕ್ಷರಾದ ಪುಷ್ಪ ಕೆ ಸ್ವಾಗತಿಸಿ, ವಿಶಾಲಾಕ್ಷಿ ಟೀಚರ್ ಧನ್ಯವಾದ ನೀಡಿದರು ಸುಜಾತಾಗಣೆಶ್ ಕಾರ್ಯಕ್ರಮ ನಿರೂಪಿಸಿದರು.