ಕೊಲ್ಚಾರ್ ಶಾಲೆ ದ. ಕ ಜೆಲ್ಲೆಯಿಂದ ಪ್ರಾಥಮಿಕ ವಿಭಾಗ ದಲ್ಲಿ ” ಅತ್ಯುತ್ತಮ ಶಾಲೆ ” ರಾಜ್ಯ ಪ್ರಶಸ್ತಿಗೆ ಪ್ರಸ್ತಾವನೆ

0


ಕರ್ನಾಟಕ ಸರ್ಕಾರದ ವತಿಯಿಂದ 2024-25 ನೇ ಸಾಲಿನ ಮಾಜಿ ಶಿಕ್ಷಣ ಸಚಿವ ದಿ.ಎಚ್.ಜಿ ಗೋವಿಂದೇ ಗೌಡರವರ ಹೆಸರಿನಲ್ಲಿ ಬೆಂಗಳೂರಿನಲ್ಲಿ ಶಿಕ್ಷಕರ ದಿನಾಚರಣೆಯ ದಿನ ಕೊಡಮಾಡುವ ಒಂದು ಅತ್ಯುತ್ತಮ ಕನ್ನಡ ಸರಕಾರಿ ಶಾಲೆ ಪ್ರಶಸ್ತಿಗೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಪ್ರಾಥಮಿಕ ವಿಭಾಗದಲ್ಲಿ “ಅತ್ಯುತ್ತಮ ಶಾಲೆ ರಾಜ್ಯ ಪ್ರಶಸ್ತಿ”ಗೆ ಕೊಲ್ಚಾರ್ ಶಾಲೆಯನ್ನು ಪ್ರಸ್ತಾವನೆ ನೀಡಲಾಗಿದೆ.

ದ ಕ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರ ಅಧ್ಯಕ್ಷತೆಯ ಸಮಿತಿಯಲ್ಲಿ
ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕೋಲ್ಚಾರು ಇದರ ಶಿಕ್ಷಣ ಗುಣಮಟ್ಟ, ಪರಿಸರ ಸ್ವಚ್ಛತೆ, ಗ್ರಂಥಾಲಯ, ವಿವಿಧ ಚಟುವಟಿಕೆಗಳ ಆಯೋಜನೆ, ಸಮುದಾಯದ ಸಹಭಾಗಿತ್ವ ಇನ್ನಿತರ ಚಟುವಟಿಕೆಗಳನ್ನು ಪರಿಗಣಿಸಿ ದ.ಕ ಜಿಲ್ಲೆಯಿಂದ “ಅತ್ಯುತ್ತಮ ಶಾಲೆ “ಎಂದು ಪರಿಗಣಿಸಿ ಆಯ್ಕೆ ಮಾಡಿ ರಾಜ್ಯ ಆಯ್ಕೆ ಸಮಿತಿಗೆ ಕಳುಹಿಸಿಕೊಡಲಾಗಿದೆ.