ಐವರ್ನಾಡಿನಲ್ಲಿ ಪಂಚಶ್ರೀ ಎಲೆಕ್ಟ್ರಿಕಲ್ & ಪ್ಲಂಬಿಂಗ್ ಸೇಲ್ಸ್ ಮತ್ತು ಸರ್ವಿಸ್ ಶುಭಾರಂಭ

0

ಐವರ್ನಾಡಿನ ಗ್ರಾಮ ಪಂಚಾಯತ್ ಕಟ್ಟಡದಲ್ಲಿ ನಿಶ್ಚಿತ್ ಗುತ್ತಿಗಾರುಮೂಲೆಯವರ ಮಾಲಕತ್ವದ ಪಂಚಶ್ರೀ ಎಲೆಕ್ಟ್ರಿಕಲ್ ಮತ್ತು ಪ್ಲಂಬಿಂಗ್ ಸೇಲ್ಸ್ & ಸರ್ವಿಸ್ ಆ.23 ರಂದು ಶುಭಾರಂಭಗೊಂಡಿತು.
ಪುರೋಹಿತ ಪದ್ಮನಾಭ ಭಟ್ ಪೂಜಾ ಕಾರ್ಯ ನೆರವೇರಿಸಿದರು.


ನಿವೃತ್ತ ಯೋಧ ,ಮಡ್ತಿಲ ಮನೆತನದ ಹಿರಿಯರಾದ ವೀರಪ್ಪ ಗೌಡ ಕೊಯಿಲ ಮಡ್ತಿಲರವರು ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು.


ಈ ಸಂದರ್ಭದಲ್ಲಿ ಜನಾರ್ಧನ ಗೌಡ ಗುತ್ತಿಗಾರುಮೂಲೆ, ಶ್ರೀಮತಿ ಭಾರತಿ, ಐವರ್ನಾಡು ಸಹಕಾರಿ ಸಂಘದ ಅಧ್ಯಕ್ಷ ಎಸ್.ಎನ್.ಮನ್ಮಥ, ಗ್ರಾ.ಪಂ.ಉಪಾಧ್ಯಕ್ಷ ಬಾಲಕೃಷ್ಣ ಕೀಲಾಡಿ, ಪಿಡಿಒ ಶ್ಯಾಮ್ ಪ್ರಸಾದ್, ಚಂದ್ರಹಾಸ ಗುತ್ತಿಗಾರುಮೂಲೆ, ರವೀಂದ್ರ ಮಡ್ತಿಲ,ಅರುಣ್ ಗುತ್ತಿಗಾರುಮೂಲೆ,ಅಜಿತ್ ಗುತ್ತಿಗಾರುಮೂಲೆ,ರಕ್ಷಿತ್ ಸಾರಕೂಟೇಲು,ಶ್ರೀಮತಿ ಲೀಲಾವತಿ ಹಾಗೂ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.