ಇಂದು ಸಂಜೆ ಧೀ ಶಕ್ತಿ ಮಹಿಳಾ ಯಕ್ಷ ಬಳಗ , ತೆಂಕಿಲ ಪುತ್ತೂರುರವರಿಂದ ಯಕ್ಷಗಾನ ತಾಳಮದ್ದಳೆ ‘ದಮಯಂತಿ ಪುನಃ ಸ್ವಯಂವರ”
ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದ ಡಾl ವಿದ್ಯಾಪ್ರಸನ್ನ ಶ್ರೀಗಳು ಚಾತುರ್ಮಾಸ್ಯ ವ್ರತದ ಪ್ರಯುಕ್ತ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತಿದ್ದು
ಆ.22 ರ ಸಂಜೆ
ವಿದ್ವಾಂಸರೊಂದಿಗೆ ಮಾತು- ಸಂವಾದ ಕಾರ್ಯಕ್ರಮ “ಶ್ರೀ ಕೃಷ್ಣನ ರಾಜನೀತಿ ಎಂಬ ವಿಷಯದ ಬಗ್ಗೆ ಸಂವಾದ ನಡೆಯಿತು.
ಡಾl ಶ್ರೀ ವಿದ್ಯಾ ಪ್ರಸನ್ನ ತೀರ್ಥ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು.
ಉಪನ್ಯಾಸಕರು, ಅಂಕಣಕಾರರಾದ ರೋಹಿತ್ ತೀರ್ಥ, ವಿದ್ವಾನ್ ಕೃಷ್ಣರಾಜ ಕುತ್ಪಾಡಿ ವಿದ್ವಾಂಸರಾಗಿ
ಭಾಗವಹಿಸಿದ್ದರು.. ವೇದವ್ಯಾಸ ಸಂಶೋಧನಾ ಕೇಂದ್ರ ನಿರ್ದೇಶಕ
ಡಾ.ಸಗ್ರಿ ಆನಂದ ತೀರ್ಥ ಪ್ರಸ್ತುತಿ – ಸಂವಾದ ನಡೆಸಿದರು.
ಇಂದು (ಆ.24) ರ ಸಂಜೆ ಧೀ ಶಕ್ತಿ ಮಹಿಳಾ ಯಕ್ಷ ಬಳಗ , ತೆಂಕಿಲ ಪುತ್ತೂರು ಇವರಿಂದ ಯಕ್ಷಗಾನ ತಾಳಮದ್ದಳೆ ‘ದಮಯಂತಿ ಪುನಃ ಸ್ವಯಂವರ” ನಡೆಯಲಿದೆ.