ಸುಳ್ಯಸೀಮೆಯ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಸೋಣ ಶನಿವಾರ ಪ್ರಯುಕ್ತ ಆ. 24 ರಂದು ವಿಶೇಷ ಪೂಜೆ ನಡೆಯಿತು.
ಶ್ರಾವಣ ಮಾಸದ ಎರಡನೇ ಸೋಣ ಶನಿವಾರ ಪ್ರಯುಕ್ತ ಸೀಮೆ ದೇವಸ್ಥಾನಕ್ಕೆ ನೂರಾರು ಭಕ್ತರು ಆಗಮಿಸಿ ಪೂಜೆಯಲ್ಲಿ ಪಾಲ್ಗೊಂಡರು.
ಈ ಸಂದರ್ಭದಲ್ಲಿ ಮರ್ಕಂಜ ಲಕ್ಷ್ಮಿ ಪಾವನ ಭಜನಾ ಸಂಘ ಹಾಗೂ ಮರ್ಕಂಜದ ಶ್ರುತಿ ಯುವತಿ ಮಂಡಳಿಯ ಸದಸ್ಯರಿಂದ ಭಜನೆ ನಡೆಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಅಧಿಕಾರಿ ಅವಿನ್ ರಂಗತ್ ಮಲೆ, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷರು, ಮಾಜಿ ಸದಸ್ಯರುಗಳು, ದೇವಾಲಯದ ಸಿಬ್ಬಂದಿಗಳು ಉಪಸ್ಥಿತರಿದ್ದರು.