ಜಟ್ಟಿಪಳ್ಳ ಮಾನಸ ಮಹಿಳಾ‌ ಮಂಡಲ‌ ಮಹಾಸಭೆ

0

ಬೆಳ್ಳಿಹಬ್ಬದ ಹೊಸ್ತಿಲಲ್ಲಿರುವ ಮಾನಸ ಮಹಿಳಾ ಮಂಡಲ (ರಿ) ಜಟ್ಟಿಪಳ್ಳ,ಇದರ 2023-24 ನೇ ಸಾಲಿನ ವಾರ್ಷಿಕ ಮಹಾಸಭೆಯು ಜಟ್ಟಿಪಳ್ಳದ ಯುವಸದನ ದಲ್ಲಿ ಆ.26ರಂದು ಜರುಗಿತು.

ಮಹಿಳಾ ಮಂಡಲದ ಅಧ್ಯಕ್ಷೆ ಚಿತ್ರಲೇಖ ಮಡಪ್ಪಾಡಿ ಸಭಾಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿ ಗಳಾಗಿ ನಗರ ಪಂಚಾಯತ್ ಮಾಜಿ ಉಪಾಧ್ಯಕ್ಷೆ ಸರೋಜಿನಿ ಪೆಲತಡ್ಕ, ಮಹಿಳಾ ಮಂಡಲದ ಗೌರವಧ್ಯಕ್ಷೆ ಚಂದ್ರಾಕ್ಷಿ ಜೆ ರೈ, ಯುವಸದನ ಕಟ್ಟಡ ಸಮಿತಿ ಅಧ್ಯಕ್ಷ ರಘುನಾಥ ಜಟ್ಟಿಪಳ್ಳ ಭಾಗವಹಿಸಿ ಶುಭ ಹಾರೈಸಿದರು.

ಉಪಾಧ್ಯಕ್ಷೆ ಶೈಲಜ ಪಿ ಶೆಟ್ಟಿ ವರದಿ ವಾಚಿಸಿದರು. ದೀಪ ವಿಜಯ್ ಲೆಕ್ಕಪತ್ರ ಮಂಡಿಸಿದರು.ಮಹಿಳಾ ಮಂಡಲದ ಅಧ್ಯಕ್ಷರಾದ ಚಿತ್ರಲೇಖ ಮಡಪ್ಪಾಡಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

ರಂಜಿನಿ ಸಂಜೀವ ಮತ್ತು ಸವಿತಾ ಲಕ್ಷ್ಮಣ್ ಪ್ರಾರ್ಥಿಸಿದರು. ಖಜಾಂಚಿ ಸವಿತಾ ಲಕ್ಷ್ಮಣ್ ವಂದಿಸಿದರು. ಮಹಿಳಾ ಮಂಡಲದ ಈ ಮೊದಲಿನ ಸಮಿತಿ ಯನ್ನೇ ಮುಂದುವರಿಸುವುದಾಗಿ ತೀರ್ಮಾನಿಸಲಾಯಿತು.