ಎಂ.ಬಿ ಫೌಂಡೇಶನ್ ವತಿಯಿಂದ ಎಂ.ಬಿ. ದೇವಕಿ ಸ್ಮರಣಾರ್ಥ ಉತ್ತಮ ಶಿಕ್ಷಕ/ಶಿಕ್ಷಕಿ ಪ್ರಶಸ್ತಿಗೆ ಅರ್ಜಿ ಆಹ್ವಾನ

0

ಸುಳ್ಯದಲ್ಲಿ ಕಾರ್ಯಚರಿಸುತ್ತಿರುವ ಎಂ.ಬಿ ಫೌಂಡೇಶನ್ ವತಿಯಿಂದ ಫೌಂಡೇಶನ್ ನ ಮಾರ್ಗದರ್ಶಕರಾಗಿದ್ದ ದಿ| ಎಂ.ಬಿ ದೇವಕಿಯವರ ಸ್ಮರಣಾರ್ಥ ಶಿಕ್ಷಕರ ದಿನಾಚರಣೆ ಸಂದರ್ಭ ಉತ್ತಮ ಶಿಕ್ಷಕ/ಶಿಕ್ಷಕಿ ಪ್ರಶಸ್ತಿ ನೀಡಲು ನಿರ್ಧರಿಸಿದ್ದು, ಸುಳ್ಯ ತಾಲೂಕಿನ ಸಾಧಕ ಶಿಕ್ಷಕ ಶಿಕ್ಷಕಿಯರು ಅರ್ಜಿ ಸಲ್ಲಿಸಬಹುದಾಗಿದೆ.

ಪ್ರಶಸ್ತಿ ಯೊಂದಿಗೆ ನಗದು ಬಹುಮಾನ ನೀಡಲಾಗುವುದು.
ಸರಕಾರಿ ಶಾಲಾ ಶಿಕ್ಷಕರ ವಿಭಾಗ 1, ಖಾಸಗಿ ಶಾಲಾ ವಿಭಾಗ 1 ರಂತೆ ಪ್ರಶಸ್ತಿ ನೀಡಲಾಗುವುದು.

ತಾವು ಕರ್ತವ್ಯ ನಿರ್ವಹಿಸುತ್ತಿರುವ ಶಾಲೆಯಲ್ಲಿ ತಾವು ಮಾಡಿದ ಅಭಿವೃದ್ಧಿ ಕಾರ್ಯ, ತಮ್ಮ ಸಾಧನೆಗಳ ವಿವರಗಳನ್ನು ಎರಡು ಪುಟ ಮೀರದಂತೆ ಸೆ.5 ರ ಒಳಗೆ ಸಂಸ್ಥಾಪಕ ಅಧ್ಯಕ್ಷರು ಎಂ.ಬಿ ಫೌಂಡೇಶನ್ ಸುಳ್ಯ ಇಲ್ಲಿಗೆ ಕಳುಹಿಸಬಹುದು.