10 ಅಂಗನವಾಡಿ ಕಾರ್ಯಕರ್ತೆ, 27 ಸಹಾಯಕಿಯರ ಹುದ್ದೆಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನ

0

ಯಾವ ಅಂಗನವಾಡಿ ಇಲ್ಲಿದೆ ಪೂರ್ಣ ಮಾಹಿತಿ

ಸುಳ್ಯ ತಾಲೂಕಿನಲ್ಲಿ ತೆರವಾಗಿರುವ ಕಾರ್ಯಕರ್ತೆ ಹುದ್ದೆಗೆ-ಕಲ್ಮಡ್ಕ ಗ್ರಾಮದ ಪಡ್ಡಿನಂಗಡಿ, ಎಣ್ಣೂರು ಗ್ರಾಮದ ಎಣ್ಣೂರು, ಎಡಮಂಗಲ ಗ್ರಾಮದ ಪುಳಿಕುಕ್ಕು ಮತ್ತು ಎಡಮಂಗಲ, ಮುರುಳ್ಳ ಗ್ರಾಮದ ಶಾಂತಿನಗರ, ಕೊಲ್ಲಮೊಗ್ರು ಗ್ರಾಮದ ಗೋವಿಂದನಗರ, ದೇವಚಳ್ಳ ಗ್ರಾಮದ ದೇವ, ಜಾಲ್ಲೂರು ಗ್ರಾಮದ ಕುಕ್ಕಂದೂರು, ಕಳಂಜ ಗ್ರಾಮದ ಅಯ್ಯನಕಟ್ಟೆ ಮತ್ತು ಬಳ್ಪ ಗ್ರಾಮದ ಎಣ್ಣೆಮಜಲು ಒಟ್ಟು 10 ಕಾರ್ಯಕರ್ತೆ ಹುದ್ದೆಗಳು, ಸಹಾಯಕಿ ಹುದ್ದೆಗೆ- ಅಲೆಟ್ಟಿ ಗ್ರಾಮದ ನಾರ್ಕೋಡು, ಮರ್ಕಂಜ ಗ್ರಾಮದ ದಾಸರಬೈಲು, ಐವತ್ತೋಕ್ಲು ಗ್ರಾಮದ ಕರಿಕ್ಕಳ ಮತ್ತು ಪಾಂಡಿಗದ್ದೆ, ಮುರುಳ್ಯ ಗ್ರಾಮದ ಮದ್ಕೂರು, ಹರಿಹರಪಲ್ಲತ್ತಡ್ಕ ಗ್ರಾಮದ ಹರಿಹರಪಲ್ಲತ್ತಡ್ಕ, ದೇವಚಳ್ಳ ಗ್ರಾಮದ ಎಲಿಮಲೆ, ಬೆಳ್ಳಾರೆ ಗ್ರಾಮದ ಕಲ್ಲೋಣಿ, ಕೊಡಿಯಾಲ ಗ್ರಾಮದ ಮೂವಪ್ಪೆ, ಪೆರುವಾಜೆ ಗ್ರಾಮದ ಪೆರುವಾಜೆ, ಕಳಂಜ ಗ್ರಾಮದ ಕೋಟೆ ಮುಂಡುಗಾರು ಮತ್ತು ಅಯ್ಯನಕಟ್ಟೆ, ಉಬರಡ್ಕ ಮಿತ್ತೂರು ಗ್ರಾಮದ ಕಲ್ಲುಪಣೆ, ಕನಕಮಜಲು ಗ್ರಾಮದ ಮಾಣಿಮಜಲು, ನೆಲ್ಲೂರು ಕೆಮ್ರಾಜೆ ಗ್ರಾಮದ ನಾರ್ಣಕಜೆ, ಮಂಡೆಕೋಲು ಗ್ರಾಮದ ಇರುವಂಬಳ್ಳ ಪೇರಾಲು ಮತ್ತು ಮೈತ್ತಡ್ಕ, ಅಜ್ಞಾವರ ಗ್ರಾಮದ ಮೇದಿನಡ್ಕ, ಅಮರಪಡ್ನೂರು ಗ್ರಾಮದ ಅಕ್ಕೋಜಿಪಾಲ್, ಕೊಡಿಯಾಲ ಗ್ರಾಮದ ಕೂಡಾನಕಟ್ಟೆ, ಕೊಲ್ಲಮೊಗ್ರು ಗ್ರಾಮದ ಬೆಂಡೋಡಿ, ಸಂಪಾಜೆ ಗ್ರಾಮದ ಗಡಿಕಲ್ಲು, ಬಳ್ಪ ಗ್ರಾಮದ ಸಂಪ್ಯಾಡಿ, ಎಡಮಂಗಲ ಗ್ರಾಮದ ಮರ್ದೂರಡ್ಕ, ಏನೆಕಲ್ಲು ಗ್ರಾಮದ ಶಾರದಾಗುಡ್ಡೆ ಮತ್ತು ಸುಳ್ಯ ಕಸಬಾ ವಾರ್ಡ್ ಸಂಖ್ಯೆ -16 ಕಾಯರ್ತೋಡಿ ಒಟ್ಟು 27 ಅಂಗನವಾಡಿ ಸಹಾಯಕಿ ಹದ್ದೆಗಳು ಖಾಲಿಯಿದ್ದು, ಅಂಗನವಾಡಿ ಕಾರ್ಯಕರ್ತೆ/ಸಹಾಯಕಿಯರ ಗೌರವ ಸೇವೆಯ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಜಾಲತಾಣ https://dwcd.karnataka.gov.in ದಲ್ಲಿ ಆನೈನ್ ಸೇವೆಗಳ ಟ್ಯಾಬ್ ನಲ್ಲಿ ಅಂಗನವಾಡಿ ಕಾರ್ಯಕರ್ತೆ/ಸಹಾಯಕಿಯರ ನೇಮಕಾತಿಯ ಸಬ್ ಟ್ಯಾಬ್‌ನಲ್ಲಿ ಹೈಕ್ ಮಾಡುವ ಮೂಲಕ ಆನ್‌ಲೈನ್ ವೆಟೈಟ್ ವಿಳಾಸ: https:// karnemakaone.kar.nic.in/abcd/ ಮೂಲಕ ಮಾರ್ಗಸೂಚಿ/ನಿಬಂಧನೆಗಳು ತಿಳಿಸಿರುವಂತೆ ಅರ್ಹ ಮಹಿಳಾ ಮತ್ತು ಲಿಂಗತ್ವ ಅಲ್ಪಸಂಖ್ಯಾತ ಅಭ್ಯರ್ಥಿ ಗಳಿಂದ ಆನ್ ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 26.09.2024 ವರೆಗೆ ಹೆಚ್ಚಿನ ವಿವರಗಳನ್ನು ಕಛೇರಿಯ ಸೂಚನ ಫಲಕದಲ್ಲಿ ಪ್ರಕಟಿಸಲಾಗಿರುತ್ತದೆ ಮತ್ತು ದೂರವಾಣಿ ಸಂಖ್ಯೆ: 08257-230239 ಇದ್ದರ ಮೂಲಕ ಕಛೇರಿ ಸಮಯದಲ್ಲಿ ಪಡಕೊಳ್ಳಬಹುದು.