ಅಡ್ತಲೆಯಲ್ಲಿ 6ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ

0

ಸ್ಪಂದನ ಗೆಳೆಯರ ಬಳಗ, ಅಡ್ತಲೆ ಇದರ ವತಿಯಿಂದ ಆರನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ -ಕ್ರೀಡಾ ಸ್ಪರ್ಧೆಗಳು ಅಡ್ತಲೆ ವಠಾರದಲ್ಲಿ ಸೆ. 1 ರಂದು ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಅಡ್ತಲೆ-ಬೆದ್ರುಪಣೆ ಉಳ್ಳಾಕುಲು ದೈವಸ್ಥಾನದ ಅಧ್ಯಕ್ಷ ಗಣೇಶ್ ಮಾಸ್ತರ್ ಆಡ್ತಲೆ ಇವರು ನೆರವೇರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ಪಂದನ ಗೆಳೆಯರ ಬಳಗ ಅಡ್ತಲೆ ಇದರ ಅಧ್ಯಕ್ಷ ವಿನಯ್ ಕುಮಾರ್ ಬೆದ್ರುಪಣೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಅಡ್ತಲೆ-ಬೆದ್ರುಪಣೆ ಉಳ್ಳಾಕುಲು ದೈವಸ್ಥಾನದ ಪ್ರಧಾನ ಪೂಜಾರಿ ತೀರ್ಥರಾಮ ಅಡ್ತಲೆ, ಸ.ಮಾ.ಹಿ.ಪ್ರಾ.ಶಾಲೆ ಅರಂತೋಡಿನ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಸರಸ್ವತಿ ಅಡ್ತಲೆ, ಮೈತ್ರಿ ಸ್ವಸಹಾಯ ಸಂಘ ಅಡ್ತಲೆ ಇದರ ಅಧ್ಯಕ್ಷ ಸೀತಾರಾಮ ಪಿಂಡಿಮನೆ ಇವರು ಭಾಗವಹಿಸಿದರು.

ಕಾರ್ಯಕ್ರಮಕ್ಕೆ ಬಳಗದ ನಿರ್ದೇಶಕರಾದ ಪ್ರವೀಣ್ ಪಾನತ್ತಿಲ ಸ್ವಾಗತಿಸಿ, ಇನ್ನೋರ್ವ ನಿರ್ದೇಶಕ ರತನ್ ಕಿರ್ಲಾಯ ವಂದಿಸಿದರು.

ಬಳಗದ ಸದಸ್ಯ ರಂಜಿತ್ ಅಡ್ತಲೆ ಕಾರ್ಯಕ್ರಮ ನಿರೂಪಿಸಿದರು.

ವಿದ್ಯಾರ್ಥಿಗಳಿಗೆ ಹಾಗೂ ಊರ ಸಾರ್ವಜನಿಕರಿಗೆ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

ಸಮಾರೋಪ ಸಮಾರಂಭ

ಸಂಜೆ ನಡೆದ ಸಮಾರೋಪ ಸಮಾರಂಭ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ಪಂದನ ಗೆಳೆಯರ ಬಳಗದ ಅಧ್ಯಕ್ಷ ವಿನಯ್ ಕುಮಾರ್ ಬೆದ್ರುಪಣೆ ವಹಿಸಿದರು.

ಮುಖ್ಯ ಅತಿಥಿಗಳಾಗಿ ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆ, ಗ್ರಾಮ ಪಂಚಾಯತ್ ಸದಸ್ಯೆ ಶ್ರೀಮತಿ ಸುಜಯ ಲೋಹಿತ್ ಮೇಲಡ್ತಲೆ, ಸ.ಹಿ.ಪ್ರಾ.ಶಾಲೆ ಅಡ್ತಲೆಯ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಭವಾನಿ ಶಂಕರ ಅಡ್ತಲೆ, ಯುವ ಜನ ಸಂಯುಕ್ತ ಮಂಡಳಿ ಅಧ್ಯಕ್ಷ ಪ್ರವೀಣ್ ಕುಮಾರ್ ಜಯನಗರ, ಸ.ಹಿ.ಪ್ರಾ.ಶಾಲೆ ಅಡ್ತಲೆಯ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಲೋಹಿತ್ ಮೇಲಡ್ತಲೆ, ನಾಗರಿಕ ಹಿತ ರಕ್ಷಣಾ ವೇದಿಕೆ ಅಧ್ಯಕ್ಷ ಹರಿಪ್ರಸಾದ್ ಅಡ್ತಲೆ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಸ್ಪರ್ಧಾ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು. ಬಳಗದ ಜೊತೆ ಕಾರ್ಯದರ್ಶಿ ಕಿಶೋರ್ ಅಡ್ಕ ಸ್ವಾಗತಿಸಿ, ಬಳಗದ ಉಪಾಧ್ಯಕ್ಷ ಲೋಹಿತ್ ಮೇಲಡ್ತಲೆ ವಂದಿಸಿದರು.

ಬಳಗದ ಸದಸ್ಯ ರಂಜಿತ್ ಅಡ್ತಲೆ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದ ಯಶಸ್ವಿಗೆ ಸ್ಪಂದನ ಗೆಳೆಯರ ಬಳಗದ ಗೌರವ ಸಲಹೆಗಾರರು,ಪದಾಧಿಕಾರಿಗಳು, ನಿರ್ದೇಶಕರು ಹಾಗೂ ಎಲ್ಲ ಸದಸ್ಯರು ಸಹಕರಿಸಿದರು.