ಕೊಳ್ತಿಗೆ : ರಬ್ಬರ್ ಟ್ಯಾಪರ್ ಕಾಣೆ – ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲು

0

ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿಯಲ್ಲಿ ರಬ್ಬರ್ ಟ್ಯಾಪಿಂಗ್ ಕೆಲಸ ಮಾಡಿಕೊಂಡಿದ್ದ ಸಿ.ಆರ್.ಸಿ.ಮನೆ ಕಲೈಅರಸು (49) ಎಂಬವರು ಆ.31 ರಿಂದ ನಾಪತ್ತೆಯಾಗಿರುವುದಾಗಿ ಬೆಳ್ಳಾರೆ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಧ್ಯಾಹ್ನ ಮನೆಯ ಹಿಂದುಗಡೆ ಇವರು ತನ್ನ ಸ್ಕೂಟಿಯನ್ನು ನಿಲ್ಲಿಸಿ ಹೋಗಿದ್ದು ವಾಪಾಸು ಮನೆಗೆ ಬಂದಿಲ್ಲ ಎಂದು ಅವರ ಪತ್ನಿ ಸುಮತಿ ಎಂಬವರು ಸೆ.03 ರಂದು ದೂರಿನಲ್ಲಿ ತಿಳಿಸಿದ್ದಾರೆ.
ಪೆರ್ಲಂಪಾಡಿ ಕೆಎಫ್ ಡಿಸಿ ಪ್ಲಾಂಟೇಷನ್ ನಲ್ಲಿ ರಬ್ಬರ್ ಟ್ಯಾಪಿಂಗ್ ಕೆಲಸ ಮಾಡಿಕೊಂಡಿದ್ದ ಇವರು ಎಣ್ಣೆಕಪ್ಪು ಮೈಬಣ್ಣ ಹೊಂದಿದ್ದು,ಕಾಫಿ ಬಣ್ಣದ ಅಂಗಿ,ನೀಲಿ ಬಣ್ಣದ ಲುಂಗಿ ತೊಟ್ಟಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಇವರನ್ನು ಯಾರಾದರು ಕಂಡರೆ ಬೆಳ್ಳಾರೆ ಪೊಲೀಸ್ ಠಾಣೆಯನ್ನು ಸಂಪರ್ಕಿಸಲು ವಿನಂತಿಸಲಾಗಿದೆ.