ಶಾಸಕಿ ಭಾಗೀರಥಿ ಮುರುಳ್ಯ ವೀಕ್ಷಣೆ – ಐದು ಲಕ್ಷ ಅನುದಾನ ಘೋಷಣೆ
ಅರಂತೋಡಿನ ನೆಹರೂ ಸ್ಮಾರಕ ಪದವಿ ಪೂರ್ವ ಕಾಲೇಜಿನ ಒಳಾಂಗಣದಲ್ಲಿ ನಿರ್ಮಾಣವಾಗುತ್ತಿರುವ ಸಭಾಭವನ ಕಾಮಗಾರಿಯನ್ನು ಶಾಸಕಿ ಭಾಗೀರಥಿ ಮುರುಳ್ಯ ಅವರು ವೀಕ್ಷಿಸಿ, ವಿದ್ಯಾರ್ಥಿಗಳ ಅವಶ್ಯಕತೆಯನ್ನು ಮನಗಂಡು ಸಂಚಾಲಕರ ಮನವಿಯ ಮೇರೆಗೆ ರೂ. ಐದು ಲಕ್ಷ ಅನುದಾನ ನೀಡುವುದಾಗಿ ಘೋಷಿಸಿದರು.
ಕಾಲೇಜಿನ ಒಳಾಂಗಣದಲ್ಲಿ ಸುಮಾರು ಆರುನೂರು ವಿದ್ಯಾರ್ಥಿಗಳ ಅವಶ್ಯಕತೆಗಾಗಿ ಸಭಾಭವನ ನಿರ್ಮಾಣ ಕಾರ್ಯ ನಡೆಯುತ್ತಿದೆ.
ಈ ಸಂದರ್ಭದಲ್ಲಿ ಅರಂತೋಡು ಗ್ರಾ.ಪಂ. ಅಧ್ಯಕ್ಷ ಕೇಶವ ಅಡ್ತಲೆ, ಅರಂತೋಡು – ತೊಡಿಕಾನ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಮಾಜಿ ಜಿ.ಪಂ. ಸದಸ್ಯರುಗಳಾದ ಸತೀಶ್ ನಾಯ್ಕ, ಹರೀಶ್ ಕಂಜಿಪಿಲಿ, ಬಿಜೆಪಿ ಆಲೆಟ್ಟಿ ಮಹಾಶಕ್ತಿಕೇಂದ್ರದ ಅಧ್ಯಕ್ಷೆ ಶ್ರೀಮತಿ ಭಾರತಿ ಪುರುಷೋತ್ತಮ ಉಳುವಾರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕಾಲೇಜಿನ ಸಂಚಾಲಕ ಕೆ.ಆರ್. ಗಂಗಾಧರ, ಆಡಳಿತ ಮಂಡಳಿಯ ಕಾರ್ಯದರ್ಶಿ ಕೆ.ಆರ್. ಪದ್ಮನಾಭ, ನಿರ್ದೇಶಕರಾದ ದಯಾನಂದ ಕುರುಂಜಿ, ಎ.ಸಿ. ವಸಂತ, ಎ.ವಿ. ಕುಸುಮಾಧರ, ಪಿ.ಎಂ. ಕೃಷ್ಣಪ್ಪ, ಯು.ಎಂ. ಶೇಷಗಿರಿ, ಕಾಲೇಜಿನ ಪ್ರಭಾರ ಪ್ರಾಂಶುಪಾಲ ಸುರೇಶ್ ವಾಗ್ಲೆ, ಪ್ರೌಢಶಾಲಾ ಮುಖ್ಯಸ್ಥ ಎಂ.ಕೆ. ಸೀತಾರಾಮ, ಸ್ಥಳೀಯ ನೇತಾರರಾದ ಎ.ಜೆ. ಸುಧಾಕರ, ಶಶಿಪ್ರಸಾದ್ ಕಾಟೂರು, ಶಾಲಾ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.