ಪಂಜ: ಲಯನ್ಸ್ ಕ್ಲಬ್ ವಲಯಾಧ್ಯಕ್ಷರ ಸಲಹಾ ಸಭೆ

0

ಲಯನ್ಸ್ ಕ್ಲಬ್ ಜಿಲ್ಲೆ 317, ಪ್ರಾಂತ್ಯ -V, ವಲಯ II ಇದರ ವಲಯಾಧ್ಯಕ್ಷರ ಸಲಹಾ ಸಭೆ ಸೆ. 5ರಂದು ಪಂಜ ಲಯನ್ಸ್ ಕ್ಲಬ್‌ನ ಆಶ್ರಯದಲ್ಲಿ ಪಂಜ ಲಯನ್ಸ್ ಭವನದಲ್ಲಿ ನಡೆಯಿತು.


ವಲಯಾಧ್ಯಕ್ಷ ರಂಗಯ್ಯ ಶೆಟ್ಟಿಗಾರ್ ವೇದಿಕೆಯಲ್ಲಿದ್ದು, ಕಾರ್ಯಕ್ರಮ ‌ನಡೆಸಿಕೊಟ್ಟರು. ಪಂಜ ಲಯನ್ಸ್ ಕ್ಲಬ್‌ನ ತುಕಾರಾಂ ಯೇನೆಕಲ್ಲು ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಪಂಜ ಲಯನ್ಸ್ ಕ್ಲಬ್‌ನ ಅಧ್ಯಕ್ಷ ಶಶಿಧರ್ ಪಳಂಗಾಯ ಸ್ವಾಗತಿಸಿದರು. ವೇದಿಕೆಯಲ್ಲಿ ವಲಯ ಪ್ರಥಮ ಮಹಿಳೆ ಶ್ರೀಮತಿ ವಿಮಲಾ ರಂಗಯ್ಯ, ವಲಯ ಸಲಹೆಗಾರ ಕೆ.ಎಸ್. ದಿನೇಶ್ ಆಚಾರ್ಯ, ಪಂಜ ಕ್ಲಬ್‌ನ ಕಾರ್ಯದರ್ಶಿ ಮೋಹನ್ ದಾಸ್ ಕೂಟಾಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಝೋನ್ V, ವಲಯ II ರ ಕ್ಲಬ್‌ಗಳಾದ ಲಯನ್ಸ್ ಕ್ಲಬ್ ಪಂಜ, ಕಡಬ, ಸುಬ್ರಹ್ಮಣ್ಯ ಮತ್ತು ಬೆಳ್ಳಾರೆ ಇದರ ಪದಾಧಿಕಾರಿಗಳು ಮತ್ತು ಅತಿಥೇಯ ಲಯನ್ಸ್ ಕ್ಲಬ್ ಪಂಜದ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು. ಪಂಜ ಕ್ಲಬ್‌ನ ಕೋಶಾಧಿಕಾರಿ ಸುರೇಶ್ ಕುಮಾರ್ ನಡ್ಕ ವಂದಿಸಿದರು.