ಯುಗನ್ ಜೇನುಕೋಡಿಗೆ ಅಂತರ್ ರಾಷ್ಟೀಯ ಕರಾಟೆಯಲ್ಲಿ ಬಹುಮಾನ

0

ಮಂಗಳೂರಿನ ಕೋರ್ಡಲ್ ಹಾಲ್ ನಲ್ಲಿ ಸೆ.6 ರಿಂದ ಸೆ.8 ರ ವರೆಗೆ ನಡೆದ ಅಂತರಾಷ್ಟ್ರೀಯ ಕರಾಟೆ ಚಾಂಪಿಯನ್ಶಿಪ್ ನಲ್ಲಿ 59 ಕೆ.ಜಿ ವಿಭಾಗದ ಯುಗನ್ ಜೇನು ಕೋಡಿ ಕಟ ಮತ್ತು ಕುಮಿಟೆ ಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ.

ಯುಗನ್ ಅವರು ಕುಮಾರಸ್ವಾಮಿ ವಿದ್ಯಾಲಯ ಸುಬ್ರಮಣ್ಯದ ಇಲ್ಲಿನ 9ನೇ ತರಗತಿ ವಿದ್ಯಾರ್ಥಿ. ಇವರು ಏನೇಕಲ್ಲು ಗ್ರಾಮದ ಮೋಹಿತ್ ಜೇನುಕೋಡಿ ಮತ್ತು ಭವ್ಯ ದಂಪತಿಯ ಪುತ್ರ. ದಿನೇಶ್ ಮುರುಳ್ಯ ಅವರ ಬಳಿ ಕರಾಟೆ ತರಬೇತಿಯನ್ನು ಪಡೆಯುತ್ತಿದ್ದಾರೆ.