ಕಸ್ತೂರಿರಂಗನ್ ವರದಿಯನ್ನು ವಿರೋಧಿಸಲು ಸಭೆ

0

ಕಸ್ತೂರಿ ರಂಗನ್ ವರದಿಯನ್ನು ವಿರೋಧಿಸಲು ರಾಜ್ಯಮಟ್ಟದ ಹೋರಾಟ ಸಮಿತಿಯನ್ನು ರೂಪಿಸಲು ಉದ್ದೇಶಿಸಲಾಗಿದ್ದು. ಈ ಬಗ್ಗೆ ಚರ್ಚಿಸಲು ಸುಬ್ರಹ್ಮಣ್ಯದ ಪಂಚಾಯತ್ ಸಭಾಭವನದಲ್ಲಿ ಸೆ.4 ರಂದು ಸಭೆ ನಡೆಸಲಾಯಿತು.

ಸಭೆಯಲ್ಲಿ ಕೆಲ ನಿರ್ಣಯಗಳ ಬಗ್ಗೆ ಚರ್ಚಿಸಲಾಯಿತು.


ಕಸ್ತೂರಿ ರಂಗನ್ ವರದಿ ಬಾದಿತ ಗ್ರಾಮಗಳಿಗೆ ವೇದಿಕೆಯ ಸದಸ್ಯರೊಂದಿಗೆ ಭೇಟಿ ನೀಡಿ ವರದಿ ಸಾಧಕ ಬಾಧಕಗಳ ಬಗ್ಗೆ ಚರ್ಚಿಸುವುದು. ಈಗಾಗಲೇ ರೈತರು ಅನುಭವಿಸುವ ಕೋವಿ ಪರವಾನಿಗೆ, ಕಾಡು ಪ್ರಾಣಿ ಹಾವಳಿ, ಭೂ ದಾಖಲೆಗೆ ಆಗುವು ತೊಂದರೆ ಮತ್ತಿತರ ತೊಂದರೆಗಳ ಬಗ್ಗೆ ಚರ್ಚಿಸುವುದು. ಈ ಹಿಂದೆ ಕಸ್ತೂರಿ ರಂಗನ್ ವರದಿ ಜಾರಿಯಾಗುತ್ತದೆ ಎಂದು ತಿಳಿದು ಬಂದಾಗ ಬಾದಿತ ಗ್ತಾಮಗಳ ವಿಶೇಷ ಗ್ರಾಮ ಸಭೆ ನಡೆಸಿ ನಿರ್ಣಯಿಸಲಾದ ನಿರ್ಣಯಕ್ಕೆ ಯಾವುದೇ ಬೆಲೆ ನೀಡದೆ ವರದಿ ಅಂಗೀಕಾರ ಮಾಡುವುದನ್ನು ವಿರೋಧಿಸಿ ಜನ ಜಾಗೃತಿ ‌ಮಾಡುವ ಬಗ್ಗೆ ಮುಂದಿನ ನಡೆಯ ಬಗ್ಗೆ ಚರ್ಚಿಸಲಾಯಿತು. ಮುಂದಿನ ದಿನಗಳಲ್ಲಿ ಸುಬ್ರಹ್ಮಣ್ಯ ದಲ್ಲಿ ವಿಶೇಷ ರೈತ ಚಳವಳಿ ಸಮಾವೇಶ ನಡೆಸುವ ಬಗ್ಗೆ ನಿರ್ಣಯಿಸಲಾಗಿದೆ ಎಂದು ತಿಳಿದು ಬಂದಿದೆ. ಮಲೆನಾಡು ಜನಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಕಿಶೋರ್ ಶಿರಾಡಿ ಮತ್ತಿತರರು ಉಪಸ್ಥಿತರಿದ್ದರು.