ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

0

ರೂ.218.80 ಕೋಟಿ ವ್ಯವಹಾರ, 64.34 ಲಕ್ಷ ಲಾಭ, ಸದಸ್ಯರಿಗೆ ಶೇ.8 ಡಿವಿಡೆಂಡ್

ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 2023-24 ನೇ ಸಾಲಿನ ವಾರ್ಷಿಕ. ಮಹಾಸಭೆಯು ಸೆ.13 ರಂದು ಸಂಘದ ಅಧ್ಯಕ್ಷ ಎಸ್.ಎನ್ ಮನ್ಮಥ ರವರ ಅಧ್ಯಕ್ಷತೆಯಲ್ಲಿ ಸಂಘದ ಸಭಾಭವನದಲ್ಲಿ ನಡೆಯಿತು.


ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದೀಕ್ಷಿತ್ ಎಂ.ಎಚ್.ವರದಿ ಮಂಡಿಸಿದರು.
ಸಂಘದ ಅಧ್ಯಕ್ಷ ಎಸ್.ಎನ್.ಮನ್ಮಥರವರು ಸ್ವಾಗತಿಸಿ ಸಂಘವು ವರದಿ ವರ್ಷದಲ್ಲಿ ರೂ.218.80 ಕೋಟಿ ವ್ಯವಹಾರ ನಡೆಸಿ ರೂ.64.34 ಲಕ್ಷ ಲಾಭ ಗಳಿಸಿರುತ್ತದೆ.
ಸದಸ್ಯರಿಗೆ ಶೇ.8 ಡಿವಿಡೆಂಡ್ ನೀಡಲಾಗುವುದು ಎಂದು ಹೇಳಿದರು‌.
ಸಂಘದ ದಿನಸಿ ವಿಭಾಗದಲ್ಲಿ ಹೆಚ್ಚು ದಿನಸಿ ಸಾಮಾಗ್ರಿಗಳನ್ನು ಖರೀದಿಸಿದವರನ್ನು ಬಹುಮಾನ ನೀಡಿ ಗೌರವಿಸಲಾಯಿತು.


ನವೋದಯ ಸಂಘದಲ್ಲಿ ಹೆಚ್ಚು ವ್ಯವಹಾರ ಮಾಡಿದ 2 ಸಂಘಗಳನ್ನು ಗುರುತಿಸಿ ಬಹುಮಾನ ನೀಡಲಾಯಿತು.
ಚಂದ್ರಾ ಕೋಲ್ಚಾರ್, ಶಿವರಾಮ ನೆಕ್ರೆಪ್ಪಾಡಿ,ಬಾಲಕೃಷ್ಣ ಕೀಲಾಡಿ,ಶಾಂತಾರಾಮ ಕಣಿಲೆಗುಂಡಿ,ಜಯಪ್ರಸಾದ್ ಕಜೆತ್ತಡ್ಕ, ಶೀನಪ್ಪ ಗೌಡ ನಿಡ್ಡಾಜೆ, ಪದ್ಮನಾಭ ಗೌಡ ನೂಜಾಲು,ಮಂಜುನಾಥ ಮಡ್ತಿಲ ಮತ್ತಿತರು ಸಂಘದ ಅಭಿವೃದ್ಧಿಗೆ ,ವಾರ್ಷಿಕ ವರದಿ ಬಗ್ಗೆ ಚರ್ಚಿಸಿದರು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ವಿಕ್ರಂ ಪೈ, ನಿರ್ದೇಶಕರಾದ ಎಂ.ಸಿ.ಕುಸುಮಾಧರ,ಮಹೇಶ ಜೆ,ಸತೀಶ ಎ.ಕೆ,ಶ್ರೀಮತಿ ದೇವಕಿ ಸಿ.ಜಿ,ಶ್ರೀಮತಿ ಭವಾನಿ ಎಂ.ಸಿ,ಶ್ರೀಮತಿ ಸರಸ್ವತಿ ಕೆ,ಕೃಷ್ಣ ಬೆಳ್ಚಪ್ಪಾಡ,ಪುರಂದರ ಎಸ್,ಚಂದ್ರಶೇಖರ ಎಸ್,ವಾಸುದೇವ ಬಿ.ಕೆ, ದ.ಕ.ಜಿ.ಕೇಂದ್ರ ಸಹಕಾರಿ ಬ್ಯಾಂಕ್ ಮೇಲ್ವಿಚಾರಕ ಪಿ.ಬಾಲಕೃಷ್ಣ ಗೌಡ ,ಸಂಘದ ಆಂತರಿಕ ಲೆಕ್ಕಪರಿಶೋಧಕ ಅನಂತಕೃಷ್ಣ ಚಾಕೋಟೆ ವೇದಿಕೆಯಲ್ಲಿದ್ದರು.
ನಿರ್ದೇಶಕ ಸತೀಶ್ ಎಡಮಲೆ ವಂದಿಸಿದರು.