ಅರಂತೋಡು ಮೆಹಫಿಲ್ ಮೀಲಾದ್ ಲೋಗೋ ಬಿಡುಗಡೆ

0

ಬದ್ರಿಯಾ ಜುಮಾ ಮಸೀದಿ ಅನ್ವಾರುಲ್ ಹುಧಾ ಯಂಗ್ ಮೆನ್ಸ್ ಎಸೋಸಿಯೇಶನ್ ಮತ್ತು ನುಸ್ರತುಲ್ ಇಸ್ಲಾಂ ಮದರಸ ಇದರ ಆಶ್ರಯದಲ್ಲಿ ಸೆ. 16ರಂದು ವಿಶ್ವ ಪ್ರವಾದಿ ಮುಹಮ್ಮದ್ ಪೈಗಂಬರ್ ರವರ ಜನ್ಮ ದಿನಾಚರಣೆ ಪ್ರಯುಕ್ತ ನಡೆಯುವ ಮೆಹಫಿಲ್ ಮೀಲಾದ್ ಕಾರ್ಯಕ್ರಮದ ಲೋಗೋವನ್ನು ಅರಂತೋಡು ಬದ್ರಿಯಾ ಜುಮಾ ಮಸೀದಿಯ ಖತೀಬರಾದ ಬಹು| ಇಸ್ಮಾಯಿಲ್ ಫೈಝಿ ಬಿಡುಗಡೆಗೊಳಿಸಿದರು.

ಈ ಸಂಧರ್ಭದಲ್ಲಿ ಅನ್ವಾರುಲ್ ಹುಧಾ ಯಂಗ್ ಮೆನ್ಸ್ ಎಸೋಸಿಯೇಶನ್ ಗೌರವಾಧ್ಯಕರು ಹಾಗೂ ತೆಕ್ಕಿಲ್ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಟಿ.ಎಂ ಶಹೀದ್ ತೆಕ್ಕಿಲ್, ಜಮಾಅತ್ ಅಧ್ಯಕ್ಷ ಅಶ್ರಫ್ ಗುಂಡಿ, ಸದರ್ ನೌಶಾದ್ ಅಝ್ ಹರಿ, ಸಹಾಯಕ ಅಧ್ಯಾಪಕ ಅಶ್ರಫ್ ಆಲಿ ಮುಸ್ಲಿಯಾರ್, ಅನ್ವಾರುಲ್ ಹುಧಾ ಯಂಗ್ ಮೆನ್ಸ್ ಎಸೋಸಿಯೇಶನ್ ಅಧ್ಯಕ್ಷ ಎಸ್.ಎಂ ಅಬ್ದುಲ್ ಮಜೀದ್, ಜಮಾಅತ್ ಕಾರ್ಯದರ್ಶಿ ಕೆ.ಎಂ ಮೂಸಾನ್, ಕೋಶಾಧಿಕಾರಿ ಕೆ.ಎಂ ಅಬೂಬಕ್ಕರ್ ಪಾರೆಕ್ಕಲ್, ಉಪಾಧ್ಯಕ್ಷ ಹಾಜಿ ಕೆ.ಎಂ ಮಹಮ್ಮದ್, ಮದರಸ ಸಂಚಾಲಕ ಅಮೀರ್ ಕುಕ್ಕುಂಬಳ, ಅನ್ವಾರುಲ್ ಹುದಾ ಎಸೋಸಿಯೇಶನ್ ಸ್ಥಾಪಕಾಧ್ಯಕ್ಷ ಹಾಜಿ ಟಿ.ಎಂ ಬಾಬಾ ತೆಕ್ಕಿಲ್, ಕಾರ್ಯದರ್ಶಿ ಪಸೀಲು, ಕೋಶಾಧಿಕಾರಿ ಹಾಜಿ ಅಝಾರುದ್ಧೀನ್, ಮಾಜಿ ಅಧ್ಯಕ್ಷ ಎ. ಹನೀಫ್, ಮಾಜಿ ಅಧ್ಯಕ್ಷ ಹಾಜಿ ಅಬ್ದುಲ್ ಖಾದರ್ ಪಠೇಲ್, ಸೌಧಿ ಸಮಿತಿ ಗೌರವಾಧ್ಯಕ್ಷ ಮೊಹಮ್ಮದ್ ಕಮಾಲ್ ಪಾರೆಕ್ಕಲ್, ಕೋಶಾಧಿಕಾರಿ ಹಬೀಬ್ ಗುಂಡಿ, ದುಬೈ ಸಮಿತಿ ಸದಸ್ಯ ರಹೀಮ್ ಉದಯನಗರ, ಮುಜೀಬ್ ಅರಂತೋಡು ರವೂಫ್ ಕ್ಯೂರ್, ಹಕೀಮ್ ಕೊಡಂಕೇರಿ, ಲತೀಫ್ ಮೊಟ್ಟೆಂಗಾರ್, ಕಬೀರ್ ಸೆಂಟ್ಯಾರ್, ಅಶ್ರೀದ್ ಗುಂಡಿ, ಮುಝಮ್ಮಿಲ್ ಕ್ಕುಕ್ಕುಂಬಳ, ಜವಾದ್ ಪಾರೆಕ್ಕಲ್, ಮೊಹಿಸಿನ್ ಹಾಶಿಮ್ ಕುಕ್ಕುಂಬಳ, ಮೈದುಕುಟ್ಟಿ, ನಿಝಾರ್ ಸೆಂಟ್ಯಾರ್, ಹಮೀದ್ ಮೊದಲಾದವರು ಉಪಸ್ಥಿತರಿದ್ದರು.