ಪೈಚಾರು ಬದ್ರಿಯಾ ಜುಮ್ಮಾ ಮಸ್ಜಿದ್ ನಲ್ಲಿ ಈದ್ ಮಿಲಾದ್ ಆಚರಣೆ

0

ಪೈಚಾರು ಬದ್ರಿಯಾ ಜುಮ್ಮಾ ಮಸ್ಜಿದ್ ನಲ್ಲಿ ಪೈಗಂಬರ್ ಮುಹಮ್ಮದ್ ನಬಿ ಯವರ ಜನ್ಮ ದಿನಾಚರಣೆಯ ಅಂಗವಾಗಿ ಈದ್ ಮಿಲಾದ್ ಹಾಗೂ ಮದರಸ ವಿದ್ಯಾರ್ಥಿಗಳ 2 ದಿನದ ಮಿಲಾದ್ ಫೆಸ್ಟ್ ಮತ್ತು ವಿಜೃಂಭಣೆಯ ಕಾಲ್ನಡಿಗೆ ಜಾಥಾ ಕಾರ್ಯಕ್ರಮ ನಡೆಯಿತು.

ಖುವ್ವತುಲ್ ಇಸ್ಲಾಮ್ ಮದರಸ ವಿದ್ಯಾರ್ಥಿಗಳು 2 ದಿನಗಳ ಮಿಲಾದ್ ಫೆಸ್ಟ್ ಮತ್ತು ವಿವಿಧ ಸ್ಪರ್ಧಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ತೋರಿದರು.

ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಹಾಜಿ ಇಬ್ರಾಹಿಂ ಪಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.


ಸ್ಥಳೀಯ ಖತೀಬರಾದ ಶಮೀರ್ ಅಹ್ಮದ್ ನಹೀಮಿರವರ ನೇತೃತ್ವದಲ್ಲಿ ಮುಂಜಾನೆ ಮೌಲೂದ್ ಪಾರಾಯಣ ದುವಾ ಮಜ್ಲಿಸ್ ನಡೆದು ಸಾಮೂಹಿಕ ಪ್ರಾರ್ಥನೆ ನಡೆಯಿತು.

ಈದ್ ಮಿಲಾದ್ ಅಂಗವಾಗಿ ಆಕರ್ಷಕ ಮಿಲಾದ್ ರ್ಯಾಲಿ ಮಸೀದಿ ಬಳಿಯಿಂದ ಮುಖ್ಯ ರಸ್ತೆ ಮೂಲಕ ಸಾಗಿ ಓಡಬಾಯಿ ಪೆಟ್ರೋಲ್ ಬಂಕ್ ವರೆಗೆ ಬಂದು ಮರಳಿ ಮಸ್ಜಿದ್ ವಠಾರದಲ್ಲಿ ಸಮಾಪನಗೊಂಡಿತು.

ಮಸೀದಿ ಸಮಿತಿ ಅಧ್ಯಕ್ಷ ಇಬ್ರಾಹಿಂ ಹಾಜಿ ಜಾಥಾಕ್ಕೆ ಚಾಲನೆ ನೀಡಿದರು. ಜಾಥಾದಲ್ಲಿ ದಫ್ ಪ್ರದರ್ಶನ ಮತ್ತು ಮದರಸ ವಿದ್ಯಾರ್ಥಿಗಳ ಮದ್ಹ್ ಗೀತೆ,ಕೀರ್ತನಗಳು ಘೋಷಣೆಗಳು ಆಕರ್ಷಣೆ ಮೆರೆಯಿತು.

ಸಮಾರೋಪ ಸಮಾರಂಭದ ಬಳಿಕ ಅನ್ನದಾನ ನಡೆಯಿತು.

ಪ್ರ.ಕಾರ್ಯದರ್ಶಿ ಹನೀಫ್ ಪಿ ಕೆ,ಉಪಾಧ್ಯಕ್ಷ ಇಬ್ರಾಹಿಂ ಸಕಲೇಶಪುರ, ಕೋಶಾಧಿಕಾರಿ ಅಬ್ಬಾಸ್, ಜೊತೆ ಕಾರ್ಯದರ್ಶಿಗಳಾದ ಅಬುಸಾಲಿ ಪೈಚಾರ್, ಮನಾಫ್ ಹಾಗೂ ಸದಸ್ಯರುಗಳು,ಅಲ್ ಅಮೀನ್ ಯೂತ್ ಸೆಂಟರ್ ಅಧ್ಯಕ್ಷ ಸತ್ತಾರ್ ಪೈಚಾರ್ ಮದರಸ ಸದರ್ ಮುಅಲ್ಲಿಮ್ ಹಂಝ ಜೋಹರಿ ಮತ್ತು ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು.

ಹನೀಫ್ ಪಿ ಕೆ ಸ್ವಾಗತಿಸಿ ಮದರಸ ಉಸ್ತುವಾರಿ ಮುಜೀಬ್ ಪೈಚಾರ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ವಿದ್ಯಾರ್ಥಿಗಳು,ಹಾಗೂ ಜಮಾಅತ್ ಕಮಿಟಿ ಸದಸ್ಯರು, ಅಲ್ ಅಮೀನ್ ಯೂತ್ ಸೆಂಟರ್ ನ ಸದಸ್ಯರುಗಳು,ಮದರಸ ಹಳೆ ವಿದ್ಯಾರ್ಥಿಗಳು,ಜಮಾಅತ್ ನ ನೂರಾರು ನಿವಾಸಿಗಳು ಭಾಗವಹಿಸಿದ್ದರು.