ಮಡಪ್ಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಹಾಸಭೆ-ಸಾಧಕರಿಗೆ ಸನ್ಮಾನ

0

ಕದಿರು ಕಟ್ಟುವ, ನವಾನ್ನ ಭೋಜನ ಸವಿಯುವ ವಿಶೇಷ ಕಾರ್ಯಕ್ರಮ

ಸದಸ್ಯರಿಗೆ ಮೊದಲ‌ ಬಾರಿ ಶೇ.15 ಡಿವಿಡೆಂಡ್ ವಿತರಣೆ

ಮಡಪ್ಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 2023-24ನೇ ಸಾಲಿನ ವಾರ್ಷಿಕ ಮಹಾಸಭೆಯು ಇಂದು(ಸೆ.20) ಮಡಪ್ಪಾಡಿಯ ಯುವಕ ಮಂಡಲದ ಸಭಾಭವನದಲ್ಲಿ ನಡೆಯಿತು. ‌

ಅಧ್ಯಕ್ಷತೆಯನ್ನು ಸೊಸೈಟಿ ಅಧ್ಯಕ್ಷರಾದ ಪಿ.ಸಿ. ಜಯರಾಮರವರು ವಹಿಸಿದ್ದರು.

ವರದಿಯನ್ನು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಪೂಂಬಾಡಿ ಮಂಡಿಸಿದರು. ಬಳಿಕ‌ ವರದಿಯ ಮೇಲೆ‌ ಚರ್ಚೆ ನಡೆದು ಅನುಮೋದನೆ ಪಡೆಯಲಾಯಿತು.

ಅಧ್ಯಕ್ಷ ಪಿ.ಸಿ. ಜಯರಾಮ ಮಾತನಾಡಿ ನಮ್ಮೆಲ್ಲಾ ಸದಸ್ಯರ ಅತ್ಯುತ್ತಮ ವ್ಯವಹಾರ ಮತ್ತು ಸಿಬ್ಬಂದಿಗಳು ಸಹಕಾರದಿಂದ 2023-24ನೇ ಸಾಲಿನಲ್ಲಿ 51 ಲಕ್ಷದ 64 ಸಾವಿರ ಲಾಭಾಂಶ ಬಂದಿದೆ‌. ಹೀಗಾಗಿ ಸದಸ್ಯರಿಗೆ ಮೊದಲ ಬಾರಿಗೆ ಶೇ.15 ಡಿವಿಡೆಂಟ್ ವಿತರಿಸಲಾಗುತ್ತಿದೆ. ಏಳು ಬೀಳುಗಳ ಮಧ್ಯೆ ಇದ್ದು ನಷ್ಟದಲ್ಲಿದ್ದ ಸೊಸೈಟಿ ಕಳೆದ 27 ವರ್ಷ ಗಳಿಂದ ನಿರಂತರ ಲಾಭದತ್ತ ಬಾರುತ್ತಿದೆ. ಈ ವರ್ಷ ಅರ್ಧ ಕೋಟಿ ಲಾಭ ಬಂದಿರುವುದು ಮತ್ತು ಸುಳ್ಯ ತಾಲೂಕಿನಲ್ಲಿಯೇ ಕಡಿಮೆ ಜನಸಂಖ್ಯೆ ಇರುವ ಗ್ರಾಮದಲ್ಲಿ ಕಡಿಮೆ ಸದಸ್ಯತನ ಹೊಂದಿ ಸುಳ್ಯ ತಾಲೂಕಿನಲ್ಲಿಯೇ ಅತೀ ಹೆಚ್ಚು ಡಿವಿಡೆಂಡ್ ವಿತರಿಸಿದ ಸೊಸೈಟಿ ಮಡಪ್ಪಾಡಿ. ಇದು ಸಂತೋಷದ ವಿಚಾರ. ಹೀಗಾಗಿ ಈ ಬಾರಿ ಹೆಚ್ಚಿನ ಡಿವಿಡೆಂಡ್ ಜೊತೆಗೆ ಮಹಾಸಭೆಗೆ ಬಂದ ಎಲ್ಲಾ ಸದಸ್ಯರಿಗೆ ವಿಶೇಷ ನೆನಪಿನ ಕಾಣಿಕೆಯನ್ನು ನೀಡುತ್ತಿದ್ದೇವೆ ಎಂದು ಘೋಷಿಸಿದರು.

ವೇದಿಕೆಯಲ್ಲಿ ಉಪಾಧ್ಯಕ್ಷ ಮಿತ್ರದೇವ ಮಡಪ್ಪಾಡಿ, ನಿರ್ದೇಶಕರುಗಳಾದ ಸೋಮಶೇಖರ ಕೇವಳ, ಪ್ರಭಾಕರ ಕೇವಳ, ಅಜಯ್ ವಾಲ್ತಾಜೆ, ರಾಜಕುಮಾರ ಪೂಂಬಾಡಿ, ಶ್ರೀಮತಿ ಪ್ರವೀಣ ಯತೀಂದ್ರನಾಥ, ಶ್ರೀಮತಿ ತಾರಾ ಜೆ.ಸಿ., ಶ್ರೀಮತಿ ಕುಂಞಕ್ಕ ಸಿ.ಯಚ್., ವಿಶ್ವನಾಥ ಸಿ.ಹೆಚ್., ಪೇರಪ್ಪ ಯಚ್., ಶೇಖರ ಕಜೆ ಉಪಸ್ಥಿತರಿದ್ದರು. ‌

ಬೆಳಿಗ್ಗೆ ಕದಿರು ಕಟ್ಟುವ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ ನವಾನ್ನ ಭೋಜನ ನಡೆಯಿತು.

ನಿರ್ದೇಶಕ ಸೋಮಶೇಖರ ಕೇವಳ ವಿದ್ಯಾರ್ಥಿ ವೇತನಕ್ಕೆ ವಿದ್ಯಾರ್ಥಿ ಗಳ ಪಟ್ಟಿ ವಾಚಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಪೂಂಬಾಡಿ ಸಂಸ್ಥೆಯಲ್ಲಿ ಅತೀ ಹೆಚ್ಚು ವ್ಯವಹಾರ ಮಾಡಿದವರ ಪಟ್ಟಿ ವಾಚಿಸಿದರು. ಉಪಾಧ್ಯಕ್ಷ ಮಿತ್ರದೇವ ಮಡಪ್ಪಾಡಿ ವಂದಿಸಿದರು.