ಪಂಜ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ

0

ಪಂಜ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ

🔸 ರೂ.2.43 ಕೋಟಿಗೂ ಮಿಕ್ಕಿ ವ್ಯವಹಾರ

🔸ರೂ.3.38 ಲಕ್ಷ ನಿವ್ವಳ ಲಾಭ

ಪಂಜ ಉತ್ಪಾದಕರ ಸಹಕಾರ ಸಂಘದ 2023-24 ನೇ ಸಾಲಿನ ಸರ್ವಸದಸ್ಯರ 37ನೇ ವಾರ್ಷಿಕ ಸಾಮಾನ್ಯ ಸಭೆ ಸೆ.20.ರಂದು ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಲ್ಲೇಗ ಪೂವಣಿ ಹೆಗ್ಡೆ ಸಭಾಭವನದಲ್ಲಿ ಜರಗಿತು.

ಪಂಜ ಶ್ರೀ ಪೈಂದೋಡಿ ಶ್ರೀ ಸುಬ್ರಾಯ ಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕ ವಿಷ್ಣು ಪೈಂದೋಡಿ ರವರು ದೀಪ ಬೆಳಗಿಸಿದರು.

ಸಂಘದ ಅಧ್ಯಕ್ಷ ಭಾಸ್ಕರ ನಾಯಕ್ ಬೇರ್ಯ ಸಭಾಧ್ಯಕ್ಷತೆ ವಹಿಸಿದ್ದರು.

ಸಂಘವು 2023-24 ಸಾಲಿನಲ್ಲಿ ಒಟ್ಟು ರೂ.2ಕೋಟಿ 43ಲಕ್ಷ 39,676.09 ವ್ಯವಹಾರ ನಡೆಸಿ ರೂ.3,38,513-64 ನಿವ್ವಳ ಲಾಭ ಗಳಿಸಿದೆ.ಪ್ರತೀ ಲೀಟರ್ ಗೆ ರೂ.1.10 ಪೈಸೆ ಬೋನಸ್, ಶೇ.10 ಷೇರು ಡಿವಿಡೆಂಟ್ ನೀಡಲಿದ್ದೇವೆ. ಎಂದು ಅವರು ಹೇಳಿದರು.

ಪಶು ವೈದ್ಯಾಧಿಕಾರಿ ಡಾ.ಸಚೀನ್ , ಜಾನುವಾರುಗಳ ಆರೋಗ್ಯ ರಕ್ಷಣೆ ಕುರಿತು ಮತ್ತು ವಿಸ್ತರಣಾಧಿಕಾರಿ ಹರೀಶ್ ಕುಮಾರ್ ಯಂ ಯಸ್ ರವರು ಹೈನುಗಾರಿಕೆ ಅಭಿವೃದ್ಧಿ ಕುರಿತು ಮಾಹಿತಿ ನೀಡಿದರು.

ಪಂಜ ಪಶು ಸಂಗೋಪನಾ ಇಲಾಖೆಯಲ್ಲಿ
ಖಾಯಂ ವೈದ್ಯರಿಲ್ಲದೆ ಹೈನುಗಾರಿಕೆಗೆ ಬಹಳಷ್ಟು ತೊಂದರೆ ಆಗುತ್ತಿದೆ ಎಂದು ಕುಸುಮಾಧರ, ಚಂದ್ರಶೇಖರ ಶಾಸ್ತ್ರಿ, ಲಕ್ಷ್ಮಣ ಗೌಡ ಬೊಳ್ಳಾಜೆ ಮೊದಲಾದವರು ಹೇಳಿದರು.
ಕ್ಷೀರ ಎಂಟರ್ಪ್ರೈಸಸ್ ಕುಸುಮಾದರ ರವರು ಅವರ ಸಂಸ್ಥೆಯಲ್ಲಿ ಹೈನುಗಾರಿಕೆಗೆ ಸಿಗುವ ಉತ್ಪನ್ನಗಳ ಕುರಿತು ಮಾಹಿತಿ ನೀಡಿದರು.
ಉಪಾಧ್ಯಕ್ಷ ಮೋನಪ್ಪ ಕೆಬ್ಲಾಡಿ, ನಿರ್ದೇಶಕರಾದ ಚನಿಯಪ್ಪ ಗೌಡ ಕುಳ್ಳಕೋಡಿ, ನಾರಾಯಣ ನಾಯ್ಕ ಚಾಳೆಗುಳಿ, ಜಯಂತ ಕುಳ್ಳಕೋಡಿ, ಉದಯ ಬಿಡಾರಕಟ್ಟೆ, ಪೆರ್ಗಡೆ ಕಾಣಿಕೆ, ಗಣೇಶ ಪಾಲೋಳಿ, ಪದ್ಮಯ್ಯ ನಾಯ್ಕ ಸಂಪ, ಶ್ರೀಮತಿ ಲಕ್ಷ್ಮೀ ನೇರಳ, ಶ್ರೀಮತಿ ಯಶೋಧ ಬರೆಮೇಲು , ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆದರ್ಶ ಚಿದ್ಗಲ್ಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪ್ರೋತ್ಸಾಹಕ -ಸನ್ಮಾನ: 2023- 24 ನೇ ಸಾಲಿನಲ್ಲಿ ಸಂಘಕ್ಕೆ ಅತೀ ಹೆಚ್ಚು ಹಾಲು ಹಾಕಿದ ದೇವದಾಸ್ ರೈ ಕೆಬ್ಲಾಡಿ ಪ್ರಥಮ, ಶ್ರೀಮತಿ ಯಶೋಧ ಬಿ.ಸಿ ಬಿಳಿಮಲೆ ದ್ವಿತೀಯ, ಶ್ರೀಮತಿ ರಾಜೀವಿ ಪಿ ಅಳ್ಪೆ ತೃತೀಯ ಸ್ಥಾನ ಪಡೆದಿದ್ದು ಅವರನ್ನು ಬಹುಮಾನ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಹೆಚ್ಚು ಹಾಲು ಹಾಕಿದ 10 ಸದಸ್ಯರಿಗೆ ಪ್ರೋತ್ಸಾಹಕ ಬಹುಮಾನ, ಅತೀ ಉತ್ತಮ ಗುಣಮಟ್ಟದ ಹೆಚ್ಚು ಹಾಲು ನೀಡಿದ ಒಬ್ಬ ಸದಸ್ಯರಿಗೆ ಪ್ರೋತ್ಸಾಹ ಬಹುಮಾನ, ಹಾಗೂ ಹಾಲು ನೀಡಿದ ಎಲ್ಲಾ ಸದಸ್ಯರಿಗೆ ಪ್ರೋತ್ಸಾಹಕ ಬಹುಮಾನ ನೀಡಲಾಯಿತು.

ಕಾರ್ಯಕ್ರಮದಲ್ಲಿ ಶ್ರೀಮತಿ ವನಿತಾ ಕರಿಮಜಲು ಪ್ರಾರ್ಥಿಸಿದರು. ಭಾಸ್ಕರ ನಾಯಕ್ ಬೇರ್ಯ ಪ್ರಾಸ್ತಾವಿಕಗೈದು, ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆದರ್ಶ ಚಿದ್ಗಲ್ಲು ವರದಿ ವಾಚಿಸಿದರು. ಮೋನಪ್ಪ ಕೆಬ್ಲಾಡಿ ವಂದಿಸಿದರು.