ಅ.2ರಿಂದ ಅ.12 : ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ನವರಾತ್ರಿ ಪೂಜೆ

0

ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ನವರಾತ್ರಿ ಪೂಜೆಯು ಅ.02 ರಿಂದ ಅ.12 ರವರೆಗೆ ನವರಾತ್ರಿ ಪೂಜೆಯು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿರುವುದು.
ಅ.02 ರಂದು ರಾತ್ರಿ ಗಂಟೆ 8.00 ಕ್ಕೆ ಶ್ರೀ ಕ್ಷೇತ್ರದ ರಂಗಪೂಜೆ ನಡೆಯಲಿರುವುದು.


ರಾತ್ರಿ ಗಂಟೆ 9.00 ಕ್ಕೆ ಭಕ್ತಾದಿಗಳ ಸಾಮೂಹಿಕ ರಂಗಪೂಜೆ ನಡೆಯಲಿರುವುದು.
ಬಳಿಕ ಮಹಾಪೂಜೆ ರಾತ್ರಿ ಗಂಟೆ 10.30 ರಿಂದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಲಿದೆ.
ಅ.02 ರಿಂದ ಅ.13 ರವರೆಗೆ ಪ್ರತೀ ದಿನ ಬೆಳಿಗ್ಗೆ ಮತ್ತು ಸಂಜೆ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.
ಅ.13 ರಂದು ಪೂರ್ವಾಹ್ನ ಗಂಟೆ 8.00 ರಿಂದ ಅಕ್ಷರಾಭ್ಯಾಸ ನಡೆಯಲಿದೆ.