ಸುಳ್ಯ ದಸರಾ ಶೋಭಾಯಾತ್ರೆಗೆ ಗಜಕೇಸರಿ ನಡುಬೈಲು ತಂಡದ ವತಿಯಿಂದ ಸ್ತಬ್ದಚಿತ್ರ ಮತ್ತು ನಾಸಿಕ್ ಬ್ಯಾಂಡ್-ಪೋಸ್ಟರ್ ಬಿಡುಗಡೆ

0

ಸುಳ್ಯ ದಸರಾ ಉತ್ಸವದ ಶೋಭಾಯಾತ್ರೆಗೆ ಗಜಕೇಸರಿ ನಡುಬೈಲು ತಂಡದಿಂದ ಸ್ತಬ್ದಚಿತ್ರ ಮತ್ತು ನಾಸಿಕ್ ಬ್ಯಾಂಡ್ ಹಮ್ಮಿಕೊಂಡಿದ್ದು, ಪೂರ್ವಭಾವಿಯಾಗಿ ಸುಳ್ಯ ಕಲ್ಕುಡ ದೈವಸ್ಥಾನ ಮತ್ತು ಶ್ರೀ ರಕ್ತೇಶ್ವರಿ ಕ್ಷೇತ್ರ ಕಾರ್ಯತೋಡಿಯಲ್ಲಿ ಪ್ರಾರ್ಥನೆ ನೆರವೇರಿಸಿ, ಪೋಸ್ಟರ್‌ನ್ನು ಸೆ.25ರಂದು ಬಿಡುಗಡೆಗೊಳಿಸಲಾಯಿತು. ಪ್ರಥಮ ದೇಣಿಗೆಯನ್ನು ಕಲ್ಕುಡ ದೈವಸ್ಥಾನದ ತಿಮ್ಮಪ್ಪರವರು ನೀಡಿದರು. ಈ ಸಂದರ್ಭ ಗೌರವಾಧ್ಯಕ್ಷರು, ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.