ಸವಣೂರು ಸೀತಾರಾಮ ರೈಯವರಿಂದ ಕೋಲ್ಚಾರು ಶಾಲಾ ಶಿಕ್ಷಕರಿಗೆ, ಎಸ್.ಡಿ.ಎಂ.ಸಿ. ಅಧ್ಯಕ್ಷರಿಗೆ ಗೌರವಾರ್ಪಣೆ

0

ಕೋಲ್ಚಾರಿನಂತ ಗ್ರಾಮೀಣ ಪ್ರದೇಶದಲ್ಲಿ ಇಷ್ಟು ಉತ್ತಮ ರೀತಿಯ ಶಾಲೆಯನ್ನು ನಡೆಸುವುದು ಸುಲಭವಲ್ಲ. ಶಾಲಾ ಶಿಕ್ಷಕ ವರ್ಗ ಮತ್ತು ಎಸ್.ಡಿ.ಎಂ.ಸಿ ಅಧ್ಯಕ್ಷ ಮತ್ತು ಸದಸ್ಯರು. ಶಾಲಾ ಪಾಲನಾ ಸಮಿತಿ ‌ಅಧ್ಯಕ್ಷರು ಮತ್ತು ಸದಸ್ಯರು ಹಾಗು ಪೋಷಕರ ಶ್ರಮದ ಫಲವಾಗಿ ರಾಜ್ಯ ಮಟ್ಟದ ಅತ್ಯುತ್ತಮ ಸರಕಾರಿ ಶಾಲಾ ಪ್ರಶಸ್ತಿ ಲಭಿಸಿದೆ.

ಈ ಶಾಲೆ ಇನ್ನಷ್ಟು ಅಭಿವೃದ್ಧಿ ಪಥದತ್ತ ಸಾಗಲಿ ಎಂದು ಸವಣೂರು ಸೀತಾರಾಮ ರೈಯವರು ಹೇಳಿದರು. ಅವರು ಸೆ. 25ರಂದು ಆದರ್ಶ ವಿವಿಧೋದ್ದೇಶದ ಸಹಕಾರ ಸಂಘ, ವಿದ್ಯಾರಶ್ಮಿ ವಿದ್ಯಾಸಂಸ್ಥೆಗಳು ಸವಣೂರು ಮತ್ತು ರೋಟರಿ ಕ್ಲಬ್ ಸುಳ್ಯ ಇದರ ಆಶ್ರಯದಲ್ಲಿ ನಡೆದ ರಾಜ್ಯ ಮಟ್ಟದಲ್ಲಿ ಅತ್ಯುತ್ತಮ ಪ್ರಾಥಮಿಕ ಶಾಲೆ ಪುರಸ್ಕಾರಕ್ಕೆ ಭಾಜನವಾದ ಕೋಲ್ಚಾರು ಶಾಲೆಯಲ್ಲಿ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಶಾಲಾ ಶಿಕ್ಷಕ ವರ್ಗ ಮತ್ತು ಎಸ್.ಡಿ.ಎಂ.ಸಿ. ಅಧ್ಯಕ್ಷರನ್ನು ಸೀತಾರಾಮ ರೈಯವರು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಕಲಿಕೆಯಲ್ಲಿ ಮುಂಚೂಣಿಯಲ್ಲಿದ್ದ ಶಾಲೆಯ 5 ವಿದ್ಯಾರ್ಥಿಗಳಿಗೆ ತಲಾ ರೂ. 2 ಸಾವಿರದಂತೆ ಮತ್ತು ಶಾಲೆಯ ಅಭಿವೃದ್ಧಿಗಾಗಿ ರೂ. 10 ಸಾವಿರ ದೇಣಿಗೆಯನ್ನು ಸೀತಾರಾಮ ರೈಯವರು ನೀಡಿದರು. ಇದೇ ಸಂದರ್ಭದಲ್ಲಿ ಸೀತಾರಾಮ ರೈಯವರನ್ನು ಮತ್ತು ರೋಟರಿ ಕ್ಲಬ್ ಅಧ್ಯಕ್ಷೆ ಯೋಗಿತಾ ಗೋಪಿನಾಥ್ ಇವರನ್ನು ಶಾಲಾ ವತಿಯಿಂದ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷೆ ಶ್ರೀಮತಿ ಯೋಗಿತಾ ಗೋಪಿನಾಥ್, ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ಸುದರ್ಶನ ಪಾತಿಕಲ್ಲು, ಗೋಪಿನಾಥ್ ಮತ್ತು ಬಾಪು ಸಾಹೇಬ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಕು. ಪರಿಣಿತ ಪ್ರಾರ್ಥಿಸಿದರು. ವೇದಿಕೆಯಲ್ಲಿದ್ದ ಶಾಲಾ ಮುಖ್ಯ ಶಿಕ್ಷಕ ಚಿನ್ನಸ್ವಾಮಿ ಶೆಟ್ಟಿ ಸ್ವಾಗತಿಸಿ, ಶಿಕ್ಷಕ ಮನುಕುಮಾರ್ ಸಿ.ಎಂ ವಂದಿಸಿದರು.

ಶಿಕ್ಷಕ ರಂಗನಾಥ್ ಎಂ.ಎಸ್ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಜಲಜಾಕ್ಷಿ ಸೀತಾರಾಮ ರೈಯವರನ್ನು ಪರಿಚಯಿಸಿದರು. ಆದರ್ಶ ಸಹಕಾರ ಸಂಘದ ಸುಳ್ಯ ಶಾಖೆಯ ವ್ಯವಸ್ಥಾಪಕರಾದ ಮನೋಜ್ ಕುಮಾರ್, ಶಾಲಾ ಶಿಕ್ಷಕರಾದ ಮಮತಾ ಕೆ.ವಿ, ವಿನುತಾ ಕೆ ಸಹಕರಿಸಿದರು. ಶಾಲಾ ವಿದ್ಯಾರ್ಥಿಗಳು, ಪೋಷಕರು ಸಭೆಯಲ್ಲಿ ಉಪಸ್ಥಿತರಿದ್ದರು.