ಮಂಗಳೂರು ವಿಶ್ವ ವಿದ್ಯಾನಿಲಯ ಮಟ್ಟದ ಅತ್ಯುತ್ತಮ ರಾಷ್ಟ್ರೀಯ ಸೇವಾ ಯೋಜನಾ ಘಟಕ ಪ್ರಶಸ್ತಿ ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿಗೆ ಮತ್ತು ಅತ್ಯುತ್ತಮ ಯೋಜನಾಧಿಕಾರಿ ಪ್ರಶಸ್ತಿ ಘಟಕ 1ರ ಯೋಜನಾಧಿಕಾರಿ ಚಿತ್ರಲೇಖ ಕೆ.ಎಸ್. ರವರಿಗೆ ಲಭಿಸಿದೆ.









ಸೆ. 26ರಂದು ಮಂಗಳೂರು ಯೂನಿವರ್ಸಿಟಿ ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ವಿಶ್ವವಿದ್ಯಾನಿಲಯ ಕುಲಪತಿಗಳು ಘಟಕ ಪ್ರಶಸ್ತಿಯನ್ನು ಎನ್. ಎಂ.ಸಿ. ಪ್ರಾಂಶುಪಾಲರಾದ ಡಾ. ಎಂ.ಎಂ. ರುದ್ರಕುಮಾರ್ ರಿಗೆ ಮತ್ತು ಅತ್ಯುತ್ತಮ ಯೋಜನಾಧಿಕಾರಿ ಪ್ರಶಸ್ತಿಯನ್ನು ಯುನಿಟ್ ಫಸ್ಟ್ ಯೋಜನಾಧಿಕಾರಿ ಚಿತ್ರಲೇಖ ಕೆ.ಎಸ್. ರವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.









