ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ನವರಾತ್ರಿ ಪೂಜೆ ಪ್ರಾರಂಭ

0

ಗಣಪತಿ ಹವನ,ಬಲಿವಾಡು ಹುಂಡಿ ಸಮರ್ಪಣೆ

ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ನವರಾತ್ರಿ ಪೂಜೆಯು ಅ.02 ರಿಂದ ಪ್ರಾರಂಭಗೊಂಡಿದ್ದು
ಅ.12 ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿರುವುದು.


ಅ.02 ರಂದು
ಬೆಳಿಗ್ಗೆ ಗಣಪತಿ ಹವನ ,ಹುಂಡಿ ಸಮರ್ಪಣೆ ನಡೆಯಿತು.
ದೇವಸ್ಥಾನದ ಪ್ರಧಾನ ಅರ್ಚಕ ಶ್ರೀನಿವಾಸ ಹೆಬ್ಬಾರ್ ಪೂಜಾ ಕಾರ್ಯ ನೆರವೇರಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತಾಧಿಕಾರಿ ಜಯಪ್ರಕಾಶ್ ಅಲೆಕ್ಕಾಡಿ,ಹಾಗೂ ಭಕ್ತಾದಿಗಳು,ದೇವಸ್ಥಾನದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಮಧ್ಯಾಹ್ನ ಶ್ರೀ ದೇವರಿಗೆ ಮಹಾಪೂಜೆ,ಅನ್ನಸಂತರ್ಪಣೆ ನಡೆಯಲಿದೆ.
ರಾತ್ರಿ ಗಂಟೆ 8.00 ಕ್ಕೆ ಶ್ರೀ ಕ್ಷೇತ್ರದ ರಂಗಪೂಜೆ ನಡೆಯಲಿರುವುದು.
ರಾತ್ರಿ ಗಂಟೆ 9.00 ಕ್ಕೆ ಭಕ್ತಾದಿಗಳ ಸಾಮೂಹಿಕ ರಂಗಪೂಜೆ ನಡೆಯಲಿರುವುದು.
ಬಳಿಕ ಮಹಾಪೂಜೆ ರಾತ್ರಿ ಗಂಟೆ 10.30 ರಿಂದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಲಿದೆ.
ಅ.02 ರಿಂದ ಅ.13 ರವರೆಗೆ ಪ್ರತೀ ದಿನ ಬೆಳಿಗ್ಗೆ ಮತ್ತು ಸಂಜೆ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.
ಅ.13 ರಂದು ಪೂರ್ವಾಹ್ನ ಗಂಟೆ 8.00 ರಿಂದ ಅಕ್ಷರಾಭ್ಯಾಸ ನಡೆಯಲಿದೆ.