ಸುಳ್ಯ ಪೊಲೀಸ್ ಠಾಣೆಗೆ ಭೇಟಿ ನೀಡಿ ಪೊಲೀಸರೊಂದಿಗೆ ಬೆರೆತ ಸರಕಾರಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು

0

ಠಾಣಾ ಪರಿಸರ ವೀಕ್ಷಿಸಿ, ಅಧಿಕಾರಿಗಳಿಂದ ಕಾನೂನು ಅರಿವು ಪಡೆದ ಪುಟಾಣಿ ವಿದ್ಯಾರ್ಥಿಗಳು

ಮುಳ್ಯ ಅಟ್ಲೂರು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಅ 3 ರಂದು ಸುಳ್ಯ ಪೊಲೀಸ್ ಠಾಣೆಗೆ ಆಗಮಿಸಿ ಠಾಣಾ ಪರಿಸರ ವೀಕ್ಷಣೆ ಮಾಡಿ ಅಧಿಕಾರಿಗಳಿಂದ ಕಾನೂನು ಅರಿವನ್ನು ಪಡೆದುಕ್ಕೊಂಡರು.

ಕೆಲ ಕಾಲ ಪೊಲೀಸರೊಂದಿಗೆ ಬೆರೆತ ಪುಟಾಣಿ ಮಕ್ಕಳು ಠಾಣಾ ಪರಿಸರದ ಮತ್ತು ಪೊಲೀಸರ ಕರ್ತವ್ಯ, ಆರೋಪಿಗಳನ್ನು ಕೂರಿಸುವ ಸೆಲ್, ಮತ್ತು ಪೊಲೀಸರು ಬಳಸುವ ಆಯುಧಗಳ ಬಗ್ಗೆ ಮಾಹಿತಿ ಪಡೆದರು.

ಠಾಣಾ ಉಪನಿರೀಕ್ಷಕರಾದ ಸಂತೋಷ್ ಹಾಗೂ ಸರಸ್ವತಿ ರವರು ವಿದ್ಯಾರ್ಥಿಗಳಿಗೆ ಪೊಲೀಸರ ಕರ್ತವ್ಯ ಹಾಗೂ ಇಲಾಖೆಯ ಉನ್ನತಮಟ್ಟದ ಕಚೇರಿಗಳ ಬಗ್ಗೆ ಮಾಹಿತಿ ನೀಡಿದರು.

ಬಳಿಕ ವಿದ್ಯಾರ್ಥಿಗಳಿಗೆ ಪೋಸ್ಕೋ ಕಾಯ್ದೆ,ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ,ಹೆಚ್ಚು ಮೊಬೈಲ್ ಬಳಕೆಯಿಂದ ಉಂಟಾಗುವ ದುಷ್ಪರಿಣಾಮ, ಮಾದಕ ವಸ್ತು ಬಳಕೆಯಿಂದ ಬರುವ ದುಷ್ಪರಿಣಾಮ,ಮತ್ತು ಈ ಎಲ್ಲಾ ಕಾನೂನು ಭಾಹಿರ ಚಟುವಟಿಕೆಕೆ ಗಳಿಗೆ ಕಾನೂನು ನೀಡುವ ಶಿಕ್ಷೆಗಳು ಮುಂತಾದ ವಿಷಯಗಳ ಬಗ್ಗೆ ಮಾಹಿತಿ ನೀಡಿದರು.

ಈ ಸಂಧರ್ಭದಲ್ಲಿ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ದೇವಿಪ್ರಸಾದ್ ಅತ್ಯಾಡಿ, ಹಾಗೂ ಸದಸ್ಯರುಗಳು, ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಅಲಕ ನಂದಿನಿ, ಶಿಕ್ಷಕವೃಂದದವರು ಉಪಸ್ಥಿತರಿದ್ದರು.