ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಕಾಲೇಜಿನ ಸಾಂಸ್ಕೃತಿಕ ತಂಡ ಯುವದಸರಕ್ಕೆ ಆಯ್ಕೆ

0


ಮೈಸೂರಿನಲ್ಲಿ ನಾಡ ಹಬ್ಬದ ಪ್ರಯುಕ್ತ ನಡೆದ ಯುವ ಸಂಭ್ರಮ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕೆಎಸ್ಎಸ್ ಕಾಲೇಜಿನ ಸಾಂಸ್ಕೃತಿಕ ತಂಡ ಯುವದಸರಕ್ಕೆ ಆಯ್ಕೆಯಾಗಿದೆ.. ದಕ್ಷಿಣ ಕನ್ನಡದ ಶಾಸ್ತ್ರೀಯ ನೃತ್ಯಗಳನ್ನು ಪ್ರಸ್ತುತ ಪಡಿಸಿದ ಈ ತಂಡ ತೀರ್ಪುಗಾರರ ಮೆಚ್ಚುಗೆ ಪಡೆದು ಆಯ್ಕೆಯಾಗಿದೆ.. ಕಾಲೇಜಿನ ಪ್ರಾಂಶುಪಾಲರಾದ ಡಾ. ದಿನೇಶ್ ಪಿ ಟಿ ಅವರ ಮಾರ್ಗದರ್ಶನದಲ್ಲಿ, ಸಾಂಸ್ಕೃತಿಕ ತಂಡದ ಸಂಯೋಜಕರಾದ ಡಾ. ವಿನ್ಯಾಸ್ ಹೊಸೊಳಿಕೆ ಮತ್ತು ರಾಜಕೀಯ ಶಾಸ್ತ್ರದ ಮುಖ್ಯಸ್ಥರಾದ ಶ್ರೀಮತಿ ಸ್ವಾತಿ ಇವರ ಮಾರ್ಗದರ್ಶನದಲ್ಲಿ ತಂಡ ಸಾಂಸ್ಕೃತಿಕ ಕಾರ್ಯಕ್ರಮವನ್ನು ಪ್ರದರ್ಶನ ಪಡಿಸಿತ್ತು. ಇದರ ನೃತ್ಯ ಸಂಯೋಜನೆಯನ್ನ ಪ್ರಮೋದ್ ರೈ ಬೆಳ್ಳಾರೆ ಮತ್ತು ಅಶೋಕ್ ಬೆಳ್ಳಾರೆ ಹಾಗೂ ಮುಖವರ್ಣಿಕೆಯಲ್ಲಿ ಸತೀಶ್ ಪಂಜ ಇವರು ಸಹಕರಿಸಿದರು..