ರಾಜ್ಯಮಟ್ಟದ ಯೋಗಾಸನ ಸ್ಪರ್ಧೆ : ದೀಕ್ಷಾ ಎಲಿಮಲೆಗೆ ಚಿನ್ನದ ಪದಕ

0

ಮೈಸೂರಿನಲ್ಲಿ ದಸರಾ ಪ್ರಯುಕ್ತ ಆಯೋಜಿಸಲಾದ 12 ರಿಂದ 14 ವರ್ಷದ ವಯೋಮಿತಿಯ ಯೋಗಾಸನ ಸ್ಪರ್ಧೆಯಲ್ಲಿ ಬಾಲಕಿಯರ ವಿಭಾಗದಲ್ಲಿ ದೀಕ್ಷಾ ಎಲಿಮಲೆ ಪ್ರಥಮ ಸ್ಥಾನ ಪಡೆದಿದ್ದು, 10 ರಿಂದ 12 ವರ್ಷದ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ನಿಹಾನಿ ವಾಲ್ತಾಜೆ 5ನೇ ಸ್ಥಾನ ಮತ್ತು ಹವೀಕ್ಷ. ಎಸ್. ಆರ್. 6ನೇ ಸ್ಥಾನ ಪಡೆದಿರುತ್ತಾರೆ.

ಗೌರಿತಾ ಕೆ.ಜಿ, ಜಿಶಾ ಕೊರ0ಬಡ್ಕ, ಅದ್ವಿತ್ ವಾಲ್ತಾಜೆ, ಮಣಿಪ್ರಕಾಶ್ ಕಡೋಡಿ, ಹನಿಕ್ಷಾ ಕೆ.ಎ, ತನುಷ್ ಕಡೋಡಿ ಭಾಗವಹಿಸಿದ್ದರು.

ಈ ವಿದ್ಯಾರ್ಥಿಗಳು ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ಗುತ್ತಿಗಾರಿನ ಅಮರ ಯೋಗ ತರಬೇತಿ ಕೇಂದ್ರದ ಯೋಗ ಶಿಕ್ಷಕ ಶರತ್ ಮರ್ಗಿಲಡ್ಕ ಅವರಿಂದ ಯೋಗ ತರಬೇತಿ ಪಡೆಯುತ್ತಿದ್ದಾರೆ.