ಅ.12. : ಪಂಜ ದ ನಾಡಹಬ್ಬ -ಶ್ರೀ ಶಾರದೋತ್ಸವ

0

ಶ್ರೀ ಶಾರದಾಂಬಾ ಭಜನಾ ಮಂಡಳಿ ಪಂಜ , ಶ್ರೀ ಶಾರದೋತ್ಸವ ಸಮಿತಿ- 2024 ಇದರ ಆಶ್ರಯದಲ್ಲಿ ಪಂಜದ ನಾಡ ಹಬ್ಬ 15 ನೇ ವರ್ಸದ ಶ್ರೀ ಶಾರದೋತ್ಸವ -2024 ಅ.12.ರಂದು ವಿವಿಧ ವೈಧಿಕ,ಧಾರ್ಮಿಕ,ಸಾಂಸ್ಕೃತಿಕ, ಕ್ರೀಡಾ ಕಾರ್ಯಕ್ರಮಗಳೊಂದಿಗೆ ಶ್ರೀ ಶಾರದಾಂಬಾ ಭಜನಾ ಮಂದಿರದಲ್ಲಿ ಜರುಗಲಿದೆ.

ಪೂರ್ವಾಹ್ನ ಗಂಟೆ 9.03ಕ್ಕೆ ಪ್ರತಿಷ್ಠೆ , ಭಜನಾ ಸಂಕೀರ್ತನೆ , ಮಕ್ಕಳಿಗೆ ಅಕ್ಷರಾಭ್ಯಾಸ , ಮಧ್ಯಾಹ್ನ ಮಹಾಪೂಜೆ, ಅನ್ನ ಸಂತರ್ಪಣೆ ಜರುಗಲಿದೆ.

ಪೂರ್ವಾಹ್ನ 9.30ಕ್ಕೆ ಕ್ರೀಡಾ- ಸಾಂಸ್ಕೃತಿಕ ಸ್ಪರ್ಧೆಗಳ ಉದ್ಘಾಟನೆ ನಡೆಯಲಿದೆ. ಸಾಂಸ್ಕೃತಿಕ ಸ್ಪರ್ಧೆಯನ್ನು ಕೇನ್ಯ ಶಾರದಾ ಗಾರ್ಡನ್ ಶ್ರೀಮತಿ ಮಮತಾ ಎಸ್ ಶೆಟ್ಟಿ ಉದ್ಘಾಟಿಸಲಿದ್ದಾರೆ. ಕ್ರೀಡಾ ಸ್ಪರ್ಧೆಯನ್ನು ಬ್ಯಾಂಕ್ ಆಫ್ ಬರೋಡ , ರಾಷ್ಟ್ರೀಯ ಕಬ್ಬಡಿ ಆಟಗಾರ ದೀವೀಶ್ ಬೊಳ್ಳಾಜೆ ಉದ್ಘಾಟಿಸಲಿದ್ದಾರೆ.

ಪೂರ್ವಾಹ್ನ ಗಂಟೆ11ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶ್ರೀ ಶಾರದೋತ್ಸವ ಸಮಿತಿ ಅಧ್ಯಕ್ಷ ಮೋನಪ್ಪ ಗೌಡ ಬೊಳ್ಳಾಜೆ, ಮೇಲ್ಮನೆ ಸಭಾಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ನ್ಯಾಯವಾದಿ ಜಗದೀಶ್ ಹುದೇರಿ, ತುಳು ರಂಗಭೂಮಿ ಕಲಾವಿದ ಮತ್ತು ವಾಗ್ಮಿ ಬಿ ರಂಗಯ್ಯ ಬಳ್ಳಾಲ್ ಕೆದಂಬಾಡಿ ಬೀಡು ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಪಂಜ ಪದವಿ ಪೂರ್ವ ಕಾಲೇಜು ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಯೋಗೀಶ್ ಚಿದ್ಗಲ್ಲು ರವರು ಸನ್ಮಾನ ಸ್ವೀಕರಿಸಲಿದ್ದಾರೆ.


ಪಂಜ ಕ್ಲಸ್ಟರಿನ 9 ಶಾಲೆಗಳ ಆಯ್ದು 9 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಶ್ರೀ ಶಾರದಾಂಬಾ ಭಜನಾ ಮಂಡಳಿ ವತಿಯಿಂದ ಪ್ರತಿಭಾ ಪುರಸ್ಕಾರ ಜರಗಲಿದೆ. ಸುಬ್ರಹ್ಮಣ್ಯ ಅನುಗ್ರಹ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಗಣೇಶ್ ಪ್ರಸಾದ್ ನಾಯರ್ ರವರು ಪುರಸ್ಕರಿಸಲಿದ್ದಾರೆ.

*ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು:
ಭಕ್ತಿ ಗೀತೆ ಮತ್ತು ರಸಪ್ರಶ್ನೆ ಸ್ಪರ್ಧೆಗಳು ಕಿರಿಯ ,ಹಿರಿಯ, ಪ್ರೌಢ, ಸಾರ್ವಜನಿಕ ವಿಭಾಗದಲ್ಲಿ ಜರುಗಲಿದೆ. ಮಹಿಳೆಯರಿಗೆ ‌ಸಂಗೀತ ಕುರ್ಚಿ,ಮೋಜಿನ ಆಟಗಳು ನಡೆಯಲಿದೆ.ರಂಗೋಲಿ ಸ್ಪರ್ಧೆ ಕಿರಿಯ, ಪ್ರೌಢ , ಸಾರ್ವಜನಿಕ ವಿಭಾಗದಲ್ಲಿ ಜರುಗಲಿದೆ. ಚಿತ್ರಕಲಾ ಸ್ಪರ್ಧೆ ಎಲ್ ಕೆ ಜಿ, ಯು ಕೆ ಜಿ ,1 ನೇ ತರಗತಿ ಐಚ್ಚಿಕ.2ರಿಂದ 4ನೇ ತರಗತಿ ಮಕ್ಕಳಿಗೆ ಸ್ವಚ್ಛ ಪರಿಸರ, 5 ರಿಂದ 7ನೇ ತರಗತಿ ಮಕ್ಕಳಿಗೆ ಶಾರದೆ, 8ರಿಂದ 10 ನೇ ತರಗತಿ ಮಕ್ಕಳಿಗೆ ಜಾನಪದ ಕಲೆಗಳು ವಿಷಯದಲ್ಲಿ ಸ್ಪರ್ಧೆಗಳು ಜರುಗಲಿದೆ.ಎಲ್.ಕೆ.ಜಿ, ಯು.ಕೆ.ಜಿ, ಅಂಗನವಾಡಿ ಮಕ್ಕಳಿಗೆ ಕಾಳು ಹೆಕ್ಕುವುದು, ಕಪ್ಪೆಜಿಗಿತ ನಡೆಯಲಿದೆ.
65ಕೆ.ಜಿ. ವಿಭಾಗದ ಪುರುಷರ ಕಬಡ್ಡಿ ಪಂದ್ಯಾಟ ಪ್ರಥಮ ರೂ.5000 ಮತ್ತು ಟ್ರೋಪಿ, ದ್ವಿತೀಯ ರೂ.3000 ಮತ್ತು ಟ್ರೋಪಿ. ಸೆಮಿ ಫೈನಲ್ ನಲ್ಲಿ ನಿರ್ಗಮಿತ ತಂಡಗಳಿಗೆ ತಲಾ ರೂ.1000 ನಗದು ಬಹುಮಾನ ವಿರುತ್ತದೆ.


ಮಹಿಳೆಯರ
ಹಗ್ಗ‌ಜಗ್ಗಾಟ ಪ್ರಥಮ ರೂ.1500, ದ್ವಿತೀಯ ರೂ.1000 ನಗದು ಬಹುಮಾನವಿರುತ್ತದೆ.
ಸಾಂಸ್ಕೃತಿಕ ಸಂಭ್ರಮ : ಮಧ್ಯಾಹ್ನ ಗಂಟೆ 2 ರಿಂದ ಕಲಾಮಂದಿರ ಡ್ಯಾನ್ಸ್ ಕ್ರೀವ್ ಪಂಜ ಹಾಗೂ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ನೃತ್ಯ ಸಂಭ್ರಮ ಜರುಗಲಿದೆ.

ವೈಭವದ ಶೋಭಾಯಾತ್ರೆ:
ಸಂಜೆ ಗಂಟೆ 4ರಿಂದ ಶ್ರೀ ಶಾರದಾ ಮಾತೆಯ ವೈಭವದ ಶೋಭಾಯಾತ್ರೆ -ಜಲಸ್ತಂಭನದಲ್ಲಿ ಅನೇಕ ಭಜನಾ ತಂಡಗಳಿಂದ ಕುಣಿತ ಭಜನೆ, ಭಜನೆ ,ಕೋಲಾಟ, ನಾಸಿಕ್ ಬ್ಯಾಂಡ್ ಪ್ರದರ್ಶನ ವಿಶೇಷ ಆಕರ್ಷಣೆಯಾಗಲಿದೆ.