ಕುಕ್ಕಟ್ಟೆ ಶ್ರೀ ಕಾಳಿಕಾಪರಮೇಶ್ವರಿ ಭದ್ರಾಕಾಳಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ

0

ಕುಕ್ಕಟ್ಟೆ ಶ್ರೀ ಕಾಳಿಕಾಪರಮೇಶ್ವರಿ ಭದ್ರಾಕಾಳಿ ದೇವಸ್ಥಾನದಲ್ಲಿ ಅ. 3ರಂದು ಪುರೋಹಿತರಾದ ಬಾಲಕೃಷ್ಣರವರ ಪೌರೋಹಿತ್ಯದಲ್ಲಿ ಅನುವಂಶಿಕ ಆಡಳ್ತೆದಾರ ಚಿಣ್ಣಯ್ಯ ಆಚಾರ್ಯರ ಉಪಸ್ಥಿಯಲ್ಲಿ ನವರಾತ್ರಿ ಉತ್ಸವ ಭಕ್ತಿ ಸಂಭ್ರಮದಲ್ಲಿ ನಡೆಯಿತು.

ಬೆಳಿಗ್ಗೆ ಮದ್ಯಾಹ್ನ ರಾತ್ರಿ ಮಹಾ ಪೂಜೆ ವಿವಿಧ ಸೇವಾ ಪೂಜೆ ನಡೆದ ಸಂದರ್ಭದಲ್ಲಿ ಪ್ರತಿ ದಿನ ಸಂಜೆ ಭಜನಾ ಕಾರ್ಯಕ್ರಮ ನಡೆಯಿತು. ಜಿಲ್ಲಾ ಮತ್ತು ಹೊರ ಜಿಲ್ಲೆಯಿಂದ ಭಕ್ತದಿಗಳು ಆಗಮಿಸಿ ಶ್ರೀದೇವಿಯ ಅನುಗ್ರಹಕ್ಕೆ ಪಾತ್ರರಾದರು.

ಕ್ಷೇತ್ರದಲ್ಲಿ ಅನ್ನದಾನ ಸೇವೆ, ದುರ್ಗಾ ನಮಸ್ಕಾರ ಪೂಜೆ, ಪುಷ್ಪ ಪೂಜೆ, ಪಂಚಾಮೃತ ಪೂಜಾ ಸೇವೆ,ಸಪ್ತ ಶಶಿ ಪಾರಾಯಣ ಸೇವೆ, ಲಲಿತ ಸಹಸ್ರ ನಾಮ ಸೇವೆ, ಗಣಪತಿ ಹೋಮ ಸೇವೆ, ನವರಾತ್ರಿ ವಿಶೇಷ ಸೇವೆ, ಭದ್ರಕಾಳಿ ಹೋಮ, ಸೇವೆಗಳು ಮಾಡುವ ಅವಕಾಶ ಭಕ್ತದಿಗಳಿಗೆ ದೊರೆಯಿತು.

ಈ ಸಂದರ್ಭದಲ್ಲಿ ಆಡಳಿತ ಸಮಿತಿ ಅಧ್ಯಕ್ಷ ಬಾಲಕೃಷ್ಣ ಮರೋಳಿ, ಕಾರ್ಯದರ್ಶಿ ಪುರುಷೋತ್ತಮ ಆಚಾರ್ಯ, ಸಮಿತಿ ಸದಸ್ಯರು, ಉತ್ಸವ ಸಮಿತಿ, ಪದಾಧಿಕಾರಿಗಳು ಉಪಸ್ಥಿತರಿದ್ದರು.

ವರದಿ :ಸಂಕಪ್ಪ ಸಾಲಿಯಾನ್ ಅಲೆಕ್ಕಾಡಿ