ಪೈಚಾರ್ :ಅಲ್ ಅಮೀನ್ ಯೂತ್ ಸೆಂಟರ್ (ರಿ) ಪೈಚಾರ್ ವತಿಯಿಂದ ಸುನ್ನತ್ ಕಾರ್ಯಕ್ರಮ

0

ಅಲ್ ಅಮೀನ್ ಯೂತ್ ಸೆಂಟರ್ ಪೈಚಾರ್ ಇದರ ಸಹಭಾಗಿತ್ವದಲ್ಲಿ. ಸಾಮೂಹಿಕ ಸುನ್ನತ್ (ಮುಂಜಿ ) ಕಾರ್ಯಕ್ರಮ ಅ.6 ರಂದು ಖುವ್ವತ್ತುಲ್ ಇಸ್ಲಾಂ ಮದರಸ ಸಭಾಂಗಣದಲ್ಲಿ ನಡೆಯಿತು.


ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಲ್ ಅಮೀನ್ ಯೂತ್ ಸೆಂಟರ್ ಪೈಚಾರ್ ಇದರ ಅದ್ಯಕ್ಷ ಅಬ್ದುಲ್ ಸತ್ತಾರ್ ಪೈಚಾರ್ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಪೈಚಾರ್ ಬದ್ರಿಯಾ ಜುಮ್ಮಾ ಮಸೀದಿ ಅಧ್ಯಕ್ಷ ಇಬ್ರಾಹಿಮ್ ಹಾಜಿ ಪಿ, ಉಪಾಧ್ಯಕ್ಷರಾದ ಇಬ್ರಾಹಿಂ ಶಾಂತಿನಗರ.,ಅಲ್ ಅಮೀನ್ ಯೂತ್ ಸೆಂಟರ್ ಉಪಾಧ್ಯಕ್ಷ ಹನೀಫ್ ಅಲ್ಫಾ,ಕಾರುಣ್ಯ ಚಾರಿಟೇಬಲ್ ಟ್ರಸ್ಟ್ ಪೈಚಾರ್ ಇದರ ಅಧ್ಯಕ್ಷ ಆರ್ ಬಿ .ಬಶೀರ್, ಡಾ‌.ಫಯಾಝ್ ಮಂಜನಾಡಿ, ಬದುರುದ್ದೀನ್ ಕಾವೇರಿ, ಎವೈಸಿ ಕೋಶಾಧಿಕಾರಿ ಸಲಾಮ್ ಪಿಎಸ್, ಅಲ್ ಅಮೀನ್ ಯೂತ್ ಸೆಂಟರ್ ಪೈಚಾರ್ ಇದರ ಸದಸ್ಯರುಗಳಾದ. ಹನೀಫ್ ಪಿಕೆ,ಆಶ್ರಫ್ ಪೈಚಾರ್.ಕರೀಮ್ ಕೆಎಮ್ಬಾ ತಿಶ,ಬಿಎಮ್,ಫವಾಝ್ ಸೊಣಂಗೇರಿ, ತಸ್ರಿಫ್ ಸೊಣಂಗೇರಿ,ಹಾರಿಸ್ ಅನೀಸ್ ಬೆಟ್ಟಂಪಾಡಿ, ಹಾಗೂ ಜಮಾಅತ್ ಸಮಿತಿಯ ಸದಸ್ಯರುಗಳು. ಹಾಗೂ ಸ್ಥಳೀಯರು ಭಾಗವಹಿಸಿದ್ದರು.

ಅಲ್ ಅಮೀನ್ ಯೂತ್ ಸೆಂಟರ್ ಪೈಚಾರ್ ಇದರ ಪ್ರಧಾನ ಕಾರ್ಯದರ್ಶಿ ಅಬೂಸಾಲಿ.ಕೆಪಿ.ಸ್ವಾಗತಿಸಿ, ಜುನೈದ್ ನಿರೂಪಿಸಿದರು.