ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇಗುಲದ ಭೋಜನ ಶಾಲೆಗೆ ಸ್ಟೀಲ್ ಮೇಜು ಕೊಡುಗೆ

0

ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಭೋಜನ ಶಾಲೆಗೆ ಸ್ಟೀಲ್ ಮೇಜು ಕೊಡುಗೆಯಾಗಿ ಶ್ರೀಮತಿ ಸೀತಾ ಮತ್ತು ಗಂಗಾಧರ ಗೌಡ ಗುಂಡಡ್ಕ ಮತ್ತು ಮಕ್ಕಳು ನೀಡಿದರು.

ಈ ಸಂದರ್ಭ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್ , ವ್ಯವಸ್ಥಾಪನಾ ಸಮಿತಿ ಸದಸ್ಯ ಧರ್ಮಪಾಲ ಗೌಡ ಕಾಚಿಲ ಮರಕಡ , ಭಕ್ತಾದಿಗಳು ಉಪಸ್ಥಿತರಿದ್ದರು.