ಬಿದ್ದು ಸಿಕ್ಕ ಬೆಲೆಬಾಳುವ ಮೊಬೈಲ್ ಫೋನ್ ಪೊಲೀಸ್ ಠಾಣೆಗೆ ನೀಡಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ

0

ರಸ್ತೆಯಲ್ಲಿ ಬಿದ್ದು ಸಿಕ್ಕಿದ ಬೆಲೆ ಬಾಳುವ ಮೊಬೈಲ್ ಫೋನ್ ಅನ್ನು ಆಟೋ ಚಾಲಕ ಪ್ರಾಮಾಣಿಕತೆ ಯಿಂದ ಸುಳ್ಯ ಪೊಲೀಸ್ ಠಾಣೆಗೆ ತಂದು ಒಪ್ಪಿಸಿ ಪ್ರಶಂಷೆಗೆ ಪಾತ್ರರಾಗಿದ್ದಾರೆ.

ಸುಳ್ಯದ ಆಟೋ ಚಾಲಕ ಕೃಷ್ಣ ಎಂಬವರಿಗೆ ಕೆವಿಜಿ ಜಂಕ್ಷನ್ ಬಳಿ ಸುಮಾರು 40 ಸಾವಿರ ರೂ ಬೆಲೆಬಾಳುವ ಐ ಫೋನ್ ಮೊಬೈಲ್ ಬಿದ್ದು ಸಿಕ್ಕಿದೆ. ಕೂಡಲೇ ಆಟೋ ಚಾಲಕರಾದ ಕೃಷ್ಣರವರು ಸುಳ್ಯ ಪೊಲೀಸ್ ಠಾಣೆಯಲ್ಲಿ ತಂದುಕೊಟ್ಟಿದ್ದಾರೆ.

ಪೊಲೀಸರು ಮೊಬೈಲ್‌ ಕಳೆದುಕೊಂಡ ಕೆವಿಜಿ ಇಂಜಿನಿಯರಿಂಗ್ ಕಾಲೇಜ್ ನ ವಿದ್ಯಾರ್ಥಿಯನ್ನು ಬರಮಾಡಿಕೊಂಡು ಮೊಬೈಲನ್ನು ಹಸ್ತಾಂತರಿಸಿದ್ದಾರೆ.