ಪಂಜ : ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ನವರಾತ್ರಿ ಪೂಜೆ

0

🟠 ಇಂದು (ಅ.9) ಗಗನ್ ಪಂಜ ಬಳಗದವರಿಂದ ಚೆಂಡೆ ಮದ್ದಳೆ

🟠 ಪಲ್ಲೋಡಿ ಶ್ರೀಮತಿ ಉಳ್ಳಾಕುಲು ಕಲಾ ರಂಗದ ವತಿಯಿಂದ ಭಜನೆ

ಪಂಜ ಸೀಮೆಯ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಳದ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ನವರಾತ್ರಿ ಪೂಜೆ ಅ3 ರಂದೂ ಆರಂಭ ಗೊಂಡಿದ್ದು ,ಅ.12 ತನಕ ಪ್ರತಿ ದಿನ ಶ್ರೀ ದೇವರಿಗೆ ಮಹಾ ಪೂಜೆ, ಪ್ರಸಾದ ವಿತರಣೆ , ಅನ್ನ ಸಂತರ್ಪಣೆ.


ಭಜನಾ ಮಂಡಳಿಗಳಿಂದ ಭಜನಾ ಸಂಕೀರ್ತನೆ, ಮತ್ತು ಅಷ್ಟಾವಾದನ ಕಾರ್ಯಕ್ರಮ ಸಂಜೆ ಗಂಟೆ 6ರಿಂದ ರಾತ್ರಿ 8.30 ರ ತನಕ ನಡೆಯಲಿದೆ.

ಪ್ರತಿ ದಿನ ಭಜನಾ ಸಂಕೀರ್ತನ ಸಂಜೆ ಗಂಟೆ 6 ರಿಂದ 7: 45 ರ ತನಕ ಮತ್ತು ಅಷ್ಟಾವಾದನ ಕಾರ್ಯಕ್ರಮ ರಾತ್ರಿ ಗಂಟೆ 8 ರಿಂದ 8:30 ತನಕ ನಡೆಯಲಿದೆ.

ಅ. 8. ರಂದು ಪಂಜ ವಲಯ ಹವ್ಯಕ ಮಹಿಳೆಯರಿಂದ ಭಜನಾ ಸಂಕೀರ್ತನೆ. ವಿದೂಷಿ ಮಾನಸ ಪುನೀತ್ ರೈ ಅವರ ಶಿಷ್ಯೆ ಆದ್ಯಾ ಬಾಬ್ಲು ಬೆಟ್ಟು ಮತ್ತು ಸ್ನೇಹ ಪಿ ರಾವ್ ರವರಿಂದ ಭರತನಾಟ್ಯ ನೃತ್ಯ ,
ದೇಗುಲದ ಅರ್ಚಕ ರಾಮಚಂದ್ರ ಭಟ್ ರವರ ಪುತ್ರಿ ಕುಮಾರಿ ಶ್ರಿಯಾ ಶಂಕರಿ ಇವರಿಂದ ಕೊಳಲು ವಾದನ ಜರುಗಿತು.
ದೇವಳದ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್ , ವ್ಯವಸ್ಥಾಪನಾ ಸಮಿತಿ ಸದಸ್ಯರು,ಸೀಮೆಯ ಭಕ್ತಾದಿಗಳು ಉಪಸ್ಥಿತರಿದ್ದರು.

ಅ.9 ರಂದು ಪಲ್ಲೋಡಿ ಶ್ರೀ ಉಳ್ಳಾಕುಲು ಕಲಾ ರಂಗದ ವತಿಯಿಂದ ಭಜನಾ ಸಂಕೀರ್ತನೆ. ಗಗನ್ ಪಂಜ ಬಳಗದವರಿಂದ ಚೆಂಡೆ ಮದ್ದಳೆ ಸೇವೆ ಜರುಗಲಿದೆ.

ಅ.10 ರಂದು ಕೇನ್ಯ ಶ್ರೀ ದುರ್ಗಾ ಪರಮೇಶ್ವರಿ ಭಜನಾ ಮಂಡಳಿ ವತಿಯಿಂದ ಭಜನಾ ಸಂಕೀರ್ತನೆ . ಪವನ್ ನರಿಯಂಗ ಕೇನ್ಯ ಇವರಿಂದ ತಬಲ ವಾದನ ಜರುಗಲಿದೆ.

ಅ.11 ರಂದು ವನಿತ ಸಮಾಜ (ರಿ) ಪಂಜ ವತಿಯಿಂದ ಭಜನಾ ಸಂಕೀರ್ತನೆ .ಕುಮಾರಿ ಹೇಮಾ ಸ್ವಾತಿ ಕುರಿಯಾಜೆ ಮತ್ತು ತಂಡ ಇವರಿಂದ ಭರತನಾಟ್ಯ ಮತ್ತು ಯಕ್ಷಗಾನ ಭಾಗವತಿಕೆ ಜರುಗಲಿದೆ.

ಅ. 12 ರಂದು ಯುವ ಸ್ಫೂರ್ತಿ ಕಲ್ಮಡ್ಕ ಇವರಿಂದ ಭಜನಾ ಸಂಕೀರ್ತನೆ.ಶ್ರೀಮತಿ ಚೈತ್ರಿಕ ಕೋಡಿಬೈಲು ರವರಿಂದ ಸಂಗೀತ ಸೇವೆ ಜರುಗಲಿದೆ.