ಸುಳ್ಯದ ನೂತನ ಸರ್ಕಲ್ ಇನ್ಸ್ ಪೆಕ್ಟರ್ ತಿಮ್ಮಪ್ಪ ನಾಯ್ಕರಿಗೆ ಮರಾಟಿ ಸಮಾಜ ಸೇವಾ ಸಂಘದಿಂದ ಗೌರವಾರ್ಪಣೆ

0

ಸುಳ್ಯದ ಸರ್ಕಲ್ ಇನ್ ಸ್ಪೆಕ್ಟರ್ ಆಗಿ ನೂತನವಾಗಿ ಆಗಮಿಸಿದ ತಿಮ್ಮಪ್ಪ ನಾಯ್ಕ್ ರವರಿಗೆ ಸುಳ್ಯ ತಾಲೂಕು ಮರಾಟಿ ಸಮಾಜ ಸೇವಾ ಸಂಘದ ವತಿಯಿಂದ ಅವರ ಕಚೇರಿಯಲ್ಲಿ ಭೇಟಿಯಾಗಿ ಗೌರವಾರ್ಪಣೆ ಮಾಡಲಾಯಿತು.
ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಬಾಲಕೃಷ್ಣ ನಾಯ್ಕ್ ಅಜ್ಜಾವರ, ಪ್ರಧಾನ ಕಾರ್ಯದರ್ಶಿ ರಮೇಶ್ ನೀರಬಿದಿರೆ, ಖಜಾಂಚಿ ಐತ್ತಪ್ಪ ನಾಯ್ಕ್, ಕಾರ್ಯಕಾರಿ ಸಮಿತಿ ಸದಸ್ಯರಾದ ನಿತ್ಯಾನಂದ ಕುಡೆಂಬಿ, ಮರಾಟಿ ಯುವ ವೇದಿಕೆಯ ಕಾರ್ಯದರ್ಶಿ ಮಿಥುನ್ ನಾಯ್ಕ್ ಉಪಸ್ಥಿತರಿದ್ದರು.