ಜಾಲ್ಸೂರು ವಿನೋಬನಗರದಲ್ಲಿ ಡ್ರೀಮ್ ಆಯಿಲ್ & ಪ್ಲೋರ್ ಮಿಲ್ ಶುಭಾರಂಭ

0

ಜಾಲ್ಸೂರಿನ ವಿನೋಬನಗರದ ಕೆ. ಎಸ್. ಎನ್. ಬಿಲ್ಡಿಂಗ್ ನಲ್ಲಿ ಸಂಜಿತ್ ಕೂಳಿಯಡ್ಕ ಮಾಲಕತ್ವದ ಡ್ರೀಮ್
ಆಯಿಲ್ & ಪ್ಲೋರ್ ಮಿಲ್ ಅ.13ರಂದು ಶುಭಾರಂಭಗೊಂಡಿತು.


ಈ ಸಂದರ್ಭದಲ್ಲಿ ಉದ್ಯಮಿ ಸುಧಾಕರ ಕಾಮತ್, ಸುದರ್ಶನ ಪಾತಿಕಲ್ಲು, ಸೀತಾರಾಮ ಕೊಲ್ಲರಮೂಲೆ,ಕಟ್ಟಡ ಮಾಲಕರಾದ ಸುಂದರ ನಾಯ್ಕ್, ವಿಶ್ವನಾಥ ಬಿ., ಸತೀಶ್ ಬಿ., ಮಾಲಕರ ತಂದೆ ಶ್ರೀಧರ ಕೂಳಿಯಡ್ಕ,ತಾಯಿ ಶ್ಯಾಮಲ ಹಾಗೂ ಬಂಧುಗಳು ಉಪಸ್ಥಿತರಿದ್ದರು.
ಇಲ್ಲಿ ಮೆಣಸು, ಅಕ್ಕಿ ಹಾಗೂ ಎಲ್ಲಾ ತರಹದ ದವಸಧಾನ್ಯಗಳನ್ನು ಹುಡಿಮಾಡಿ ಕೊಡಲಾಗುವುದು.
ಉತ್ತಮ ಗುಣಮಟ್ಟದ ಗಾಣದ ಎಣ್ಣೆಗಾಗಿ ಸಂಪರ್ಕಿಸಬಹುದು ಎಂದು ಮ್ಹಾಲಕ ಸಂಜಿತ್ ಕೂಳಿಯಡ್ಕ ತಿಳಿಸಿದ್ದಾರೆ.