
ಆಲೆಟ್ಟಿ ಗ್ರಾಮದ ಅರಂಬೂರು ಕಲ್ಚೆರ್ಪೆ ಸಿರಿಕುರಲ್ ನಗರದ ಶ್ರೀ ವನದುರ್ಗಾ ರಕ್ತೇಶ್ವರಿ ಮತ್ತು ಪರಿವಾರ ದೈವಗಳ ಸಾನಿಧ್ಯದಲ್ಲಿ 8 ನೇ ವರ್ಷದ ಶ್ರೀ ದೈವಗಳ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ
ಶ್ರೀ ಗುಳಿಗ ದೈವದ ನೇಮೋತ್ಸವವು ಡಿ.12 ರಂದು ಜರುಗಿತು.









ಬ್ರಹ್ಮಶ್ರೀ ವೇದಮೂರ್ತಿ ಬಿ.ಎಸ್.ಎನ್ ಕಡಮಣ್ಣಾಯ ತಂತ್ರಿಯವರ ಮಾರ್ಗದರ್ಶನದಲ್ಲಿ ಪುರೋಹಿತರಾದ ಅಭಿರಾಮ್ ಭಟ್ ಅರಂಬೂರು ರವರ ನೇತೃತ್ವದಲ್ಲಿ ವಿವಿಧ ವೈದಿಕ ಕಾರ್ಯಕ್ರಮಗಳು ನಡೆಯಿತು.
ಬೆಳಗ್ಗೆ ಸ್ಥಳ ಶುದ್ಧಿ,
ಗಣ ಹೋಮ, ತಂಬಿಲ ಸೇವೆಯಾಗಿ ಮಧ್ಯಾಹ್ನ ಮಹಾಪೂಜೆ ನಡೆದು ಪ್ರಸಾದ ವಿತರಣೆಯಾಗಿ ಸಾರ್ವಜನಿಕ ಅನ್ನ ಸಂತರ್ಪಣೆಯಾಯಿತು. ಸಂಜೆ ಶ್ರೀ ಗುಳಿಗ ದೈವದ ನೇಮೋತ್ಸವ ನಡೆದು ರಾತ್ರಿಪ್ರಸಾದವಿತರಣೆಯಾಗಿ ಅನ್ನಸಂತರ್ಪಣೆಯಾಯಿತು. ವಿಶೇಷವಾಗಿ ಸಾನಿಧ್ಯದಲ್ಲಿ ವನದುರ್ಗಾ ತಂಬಿಲ ಸೇವೆ, ರಕ್ತೇಶ್ವರಿ ತಂಬಿಲ ಸೇವೆ, ನಾಗತಂಬಿಲ ಸೇವೆಯನ್ನು ಭಕ್ತಾದಿಗಳು ನೆರವೇರಿಸಿದರು. ಅವಕಾಶವಿರುವುದು. ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು ಉಪಸ್ಥಿತರಿದ್ದರು. ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ಪ್ರಸಾದ ಸ್ವೀಕರಿಸಿದರು.











