ಫೋಟೋಗ್ರಾಫರ್ ಅಸೋಸಿಯೇಷನ್ ಅಧ್ಯಕ್ಷ ದಿವಾಕರ ಮುಂಡಾಜೆ ಹೃದಯಘಾತದಿಂದ ನಿಧನ

0

ಫೋಟೋಗ್ರಾಫರ್ ಅಸೋಸಿಯೇಷನ್ ಅಧ್ಯಕ್ಷ ದಿವಾಕರ ಮುಂಡಾಜೆ ಹೃದಯಾಘಾತದಿಂದ ನಿಧನ

ಹರಿಹರ ಪಲ್ಲತಡ್ಕದಲ್ಲಿ ಪತ್ರಿಕಾ ವಿತರಕ ಹಾಗೂ ಛಾಯಾಗ್ರಾಹಕರಾಗಿರುವ ದಿವಾಕರ ಮುಂಡಾಜೆಯವರು ಇಂದು ಬೆಳಿಗ್ಗೆ ತೀವ್ರ ಹೃದಯಾಘಾತಕ್ಕೊಳಗಾಗಿ ಕೊನೆಯುಸಿರೆಳೆದ ಘಟನೆ ವರದಿಯಾಗಿದೆ.


ಅವರಿಗೆ ಸುಮಾರು 55 ವರ್ಷ ವಯಸ್ಸಾಗಿತ್ತು.
ಇಂದು ಬೆಳಿಗ್ಗೆ ತನ್ನ ಅಂಗಡಿ ತೆರೆಯಲೆಂದು ತನ್ನ ಮನೆಯಿಂದ ಕಾರಲ್ಲಿ ಬರುತ್ತಿದ್ದ ದಿವಾಕರ ಮುಂಡಾಜೆಯವರಿಗೆ ಹರಿಹರ ಪಲ್ಲತಡ್ಕ ಪೇಟೆಯ ಬಳಿ ಹೃದಯಾಘಾತವಾಗಿ ಕಾರು ನಿಲ್ಲಿಸಿದರೆಂದೂ, ತೀವ್ರ ಹೃದಯಾಘಾತವಾಗಿದ್ದುದರಿಂದ ಕಾರಲ್ಲಿ ಕೂತಲ್ಲಿಯೇ ಕೊನೆಯುಸಿರೆಳೆದರೆಂದು ತಿಳಿದು ಬಂದಿದೆ.


ವಿಷಯ ಗೊತ್ತಾಗಿ ಊರವರು ಸೇರಿ ಡಾ. ಗಿರೀಶ್ ಅವರನ್ನು ಸ್ಥಳಕ್ಕೆ ಕರೆಸಿ ವೈದ್ಯಕೀಯ ತಪಾಸಣೆ ನಡೆಸಿದರು. ಆ ವೇಳೆ ಕೊನೆಯುಸಿರೆಳೆದಿರುವುದು ದೃಢಪಟ್ಟಿತೆಂದು ತಿಳಿದು ಬಂದಿದೆ.

ದಿವಾಕರ ಮುಂಡಾಜೆಯವರು ವ್ಯಾಪಾರ ವಹಿವಾಟಿನೊಂದಿಗೆ ಸಾಮಾಜಿಕ ಚಟುವಟಿಕೆಯಲ್ಲಿ ಕೂಡ ಸಕ್ರಿಯರಾಗಿದ್ದರು. ಇವರು ಹರಿಹರ ಪಲ್ಲತಡ್ಕ ಗ್ರಾ.ಪಂ ಸದಸ್ಯ