ಐವರ್ನಾಡು ಸೊಸೈಟಿ ಉದ್ಯೋಗಿ ಬೋಜಪ್ಪ ಗೌಡ ಬೈಕ್ ಡಿಕ್ಕಿಯಾಗಿ ಮೃತಪಟ್ಟ ಹಿನ್ನಲೆ

0

ಐವರ್ನಾಡು ಪೇಟೆಯಲ್ಲಿ ಅಂಗಡಿ ಮುಚ್ಚಿ ಶೋಕಾಚರಣೆ – ಸೊಸೈಟಿ ಆವರಣದಲ್ಲಿ ಅಂತಿಮ ನಮನ

ಸುಳ್ಯ ಸಮೀಪ ಆರ್ತಾಜೆಯಲ್ಲಿ ಬೈಕ್ ಹಾಗೂ ಬುಲೆಟ್ ಡಿಕ್ಕಿಹೊಡೆದುಕೊಂಡು ಬೈಕ್ ಸವಾರ ಐವರ್ನಾಡು ಸೊಸೈಟಿ ಉದ್ಯೋಗಿ ಬೋಜಪ್ಪ ಗೌಡರು ಅ.15 ರಂದು ಸಂಜೆ ಮೃತಪಟ್ಟಿದ್ದು ಇಂದು ಸೊಸೈಟಿ ಅವರಣದಲ್ಲಿ ಅಂತಿಮ ನಮನ ಸಲ್ಲಿಸಲಾಯಿತು.


ಸುಳ್ಯದಿಂದ ಮೃತರ ಪಾರ್ಥೀವ ಶರೀರವನ್ನು ಸೊಸೈಟಿ ಆವರಣಕ್ಕೆ ತರಲಾಯಿತು.
ಇಲ್ಲಿ ನೂರಾರು ಜನರು ಅಂತಿಮ ನಮನ ಸಲ್ಲಿಸಿದರು.


ಬಳಿಕ ಪಾರ್ಥೀವ ಶರೀರವನ್ನು ಮೃತರ ಮನೆಗೆ ಕೊಂಡೋಗಿ ಅಲ್ಲಿ ಅಂತಿಮ ವಿಧಿ ವಿಧಾನ ನಡೆದ ಬಳಿಕ ಅಂತ್ಯ ಸಂಸ್ಕಾರ ನಡೆಸಲಾಯಿತು.
ಈ ಸಂದರ್ಭದಲ್ಲಿ ಐವರ್ನಾಡು ಪೇಟೆಯ ವರ್ತಕರು ಎಲ್ಲಾ ಅಂಗಡಿಗಳನ್ನು ಮುಚ್ಚಿ ಶೋಕಾಚರಣೆ ನಡೆಸಿದರು.