ಪ್ರಾಮಾಣಿಕ ಸೇವೆ ನೀಡಿರುವ ಸೌಮ್ಯ ಸ್ವಭಾವದ ಅಧಿಕಾರಿ : ಸಂತೋಷ್ ಜಾಕೆ
ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರ ಸಂಘದ ವತಿಯಿಂದ ಪಂಜ ಮೆಸ್ಕಾಂ ಕಚೇರಿಯಲ್ಲಿ ಶಾಖಾಧಿಕಾರಿಯಾಗಿ ಸೇವೆ ಸಲ್ಲಿಸಿ 33 /11 ಕೆ.ವಿ ನೋಡೆಲ್ ಸೆಂಟರ್ ಪುತ್ತೂರು ಇಲ್ಲಿಗೆ ಕಿರಿಯ ಇಂಜಿನಿಯರ್ (ವಿ) ಆಗಿ ವರ್ಗಾವಣೆ ಗೊಂಡಿರುವ ಮನಮೋಹನ ಎಂ ಎ ರವರಿಗೆ ಬೀಳ್ಕೊಡುಗೆ -ಸನ್ಮಾನ ಸಮಾರಂಭ ಅ.16 ಪಂಜ ಲಯನ್ಸ್ ಭವನದಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿ ಪಂಜ ಲಯನ್ಸ್ ಕ್ಲಬ್ ನಿಕಟಪೂರ್ವಾಧ್ಯಕ್ಷ ಸಂತೋಷ್ ಜಾಕೆ ರವರು ಸನ್ಮಾನಿಸಿ ” ಮಾತನಾಡಿ ಜನರ ಸಮಸ್ಯೆಗಳಿಗೆ ಸ್ಪಂದಿಸಿ, ಅತ್ಯಂತ ಉತ್ತಮ ಮತ್ತು ಪ್ರಾಮಾಣಿಕ ಸೇವೆ ನೀಡಿರುವ ಅತ್ಯಂತ ಸೌಮ್ಯ ಸ್ವಭಾವದ ಅಧಿಕಾರಿ ಮನಮೋಹನ ರವರು” . ಎಂದು ಹೇಳಿದರು.
ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರ ಸಂಘದ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಮಾಯಿಲಪ್ಪ ಸಂಕೇಶ ಸಭಾಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಯಾಗಿ ಸುಬ್ರಹ್ಮಣ್ಯ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್
ಸತೀಶ್ ಸಪಲ್ಯ ಹಾಗೂ ನೂತನ ಪಂಜ ಶಾಖಾಧಿಕಾರಿ ಬಾಲಕೃಷ್ಣ ಗೌಡ,ಸಂಘದ ಉಪಾಧ್ಯಕ್ಷ ಹರಿಶ್ಚಂದ್ರ ಕೇಪಳಕಜೆ ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು.
ಇದೇ ವೇಳೆ ನೂತನ ಶಾಖಾಧಿಕಾರಿ ಬಾಲಕೃಷ್ಣ ಗೌಡ ರವರನ್ನು ಗುಲಾಬಿ ಹೂ ನೀಡಿ ಸ್ವಾಗತಿಸಿದರು.
ಮನಮೋಹನ ಎಂ ಎ ರವರು ಸುಳ್ಯ ತಾಲೂಕು ಅರಂತೋಡು ಗ್ರಾಮದ ಮೇಲಡ್ತಲೆ ಯವರು.
ಕಾರ್ಯಕ್ರಮದಲ್ಲಿ ಅನುಮತಿ ವಿದ್ಯುತ್ ಪಡೆದ ಗುತ್ತಿಗೆದಾರ ಸಂಘದ ಪೂರ್ವಾಧ್ಯಕ್ಷ ವಸಂತ ಕುಮಾರ್ ಕೆದಿಲ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು ಮತ್ತು ವಂದಿಸಿದರು.ಸೋಮಶೇಖರ ನೇರಳ ನಿರೂಪಿಸಿದರು.ಸಂಘದ ಸದಸ್ಯರು, ಮೆಸ್ಕಾಂ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.